ADVERTISEMENT

ಕುಮಟಾ | ಕಾಡು ಅಣಬೆ ಖರೀದಿಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 3:02 IST
Last Updated 27 ಜುಲೈ 2025, 3:02 IST
ಕುಮಟಾ ಮಾರುಕಟ್ಟೆಗೆ ಬಂದ ಕಾಡು ಅಣಬೆ
ಕುಮಟಾ ಮಾರುಕಟ್ಟೆಗೆ ಬಂದ ಕಾಡು ಅಣಬೆ   

ಕುಮಟಾ: ಈ ವರ್ಷ ಮೊದಲ ಸಲ ಪಟ್ಟಣಕ್ಕೆ ಮಾರಾಟಕ್ಕೆಂದು ಬಂದ ಕಾಡು ಅಣಬೆ ಕೊಳ್ಳಲು ಜನರು ಮುಗಿಬಿದ್ದ ದೃಶ್ಯ ಭಾನುವಾರ ಕಂಡಬಂದಿತು.

‌ಪಟ್ಟಣದ ಗಿಬ್ ವೃತ್ತದ ಬಳಿ ಶನಿವಾರ ಕಾಡು ಅಣಬೆ ಕೊಳ್ಳಲು ಜನರು ಗುಪು ಗುಂಪಾಗಿ ಆಗಮಿಸಿದರು. 25 ಕಾಡು ಅಣಬೆ ಮೊಗ್ಗುಗಳ ಒಂದು ಪೊಟ್ಟಣ ₹150 ರಂತೆ ಮಾರಾಟವಾದವು.

ತಾಲ್ಲೂಕಿನ ದಟ್ಟ ಕಾಡು ಪ್ರದೇಶವಾದ ಸೊಪ್ಪಿನಹೊಸಳ್ಳಿ ಹಾಗೂ ಸಂತೆಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಣೆ, ಮೊರಸೆ ಮುಂತಾದ ಗ್ರಾಮಗಳ ಕಾಡಂಚಿನ ನಿವಾಸಿಗಳು ಬೆಳಗಿನ ಜಾವ ಕಾಡಿನಿಂದ ಅಣಬೆ ಮೊಗ್ಗು ಸಂಗ್ರಹಿಸಿ ಮಾರಾಟಕ್ಕೆ ತರುತ್ತಾರೆ. ಕಳೆದ ಹತ್ತಾರು ವರ್ಷಗಳಿಂದ ಅಣಬೆ ಮಾರಾಟಕ್ಕೆ ಪಟ್ಟಣಕ್ಕೆ ಬರುವುದರಿಂದ ಅವರು ತಮ್ಮದೇ ಗ್ರಾಹಕರನ್ನು ಸೃಷ್ಟಿಸಿಕೊಂಡಿದ್ದಾರೆ.

ADVERTISEMENT

‘ಅಣಬೆ ಸಂಗ್ರಹಿಸುವವರಿಗೆ ಯಾವ ಮಳೆಯಲ್ಲಿ ಕಾಡು ಅಣಬೆ ಕಾಣಿಸಿಕೊಳ್ಳುತ್ತಿದೆ ಎನ್ನುವುದು ನಿಖರವಾಗಿ ಗೊತ್ತಿರುತ್ತದೆ. ಒಂದು ವಾರ ಮೊದಲೇ ಕಾಡಿನಲ್ಲಿ ಅಣಬೆ ಬೆಳೆಯುವ ಸಾಂಪ್ರದಾಯಿಕ ಸ್ಥಳಗಳನ್ನು ಗುರುತಿಸಿಟ್ಟುಕೊಂಡಿರುತ್ತೇವೆ. ಅಣಬೆ ಸಂಗ್ರಹಿಸಿ ಮಾರಾಟ ಮಾಡುವುದರಲ್ಲಿ ಈಗ ತೀವ್ರ ಸ್ಪರ್ಧೆ ಇರುವುದರಿಂದ ಬೆಳಗಿನ ಜಾವದ ಮಳೆ, ಛಳಿ ಲೆಕ್ಕಿಸದೆ ಬ್ಯಾಟರಿ ಬೆಳಕಿನಲ್ಲಿ ಅಣಬೆ ಹುಡುಕಿ ಸಂಗ್ರಹಿಸಬೇಕು. ಹೆಚ್ಚಿನ ಜನರು ಅವು ಬೆಳೆದು ದೊಡ್ಡದಾಗುವ ಮೊದಲೇ ಕಿತ್ತುಬಿಡುತ್ತಾರೆ. ಇನ್ನು ಒಂದು ತಿಂಗಳ ಕಾಲ ಮಳೆ ಹಾಗೂ ಬಿಡುವಿನ ನಡುವೆ ಅಣಬೆ ಬೆಳೆಯುತ್ತದೆ’ ಎಂದು ಮೊರಸೆ ಗ್ರಾಮದ ಜನಾರ್ಧನ ಮರಾಠಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.