ADVERTISEMENT

‘ಪಶು ಸಂಗೋಪನೆ ಇಲಾಖೆಯಿಂದ ಪರಿಹಾರ ಲಭ್ಯ’

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:42 IST
Last Updated 5 ಜೂನ್ 2025, 15:42 IST

ಸಿರುಗುಪ್ಪ: ‘ಪ್ರಕೃತಿ ವಿಕೋಪದಿಂದ ಹಾಗೂ ಅಪಘಾತಕ್ಕೀಡಾಗಿ ಸತ್ತರೆ ಪಶು ಸಂಗೋಪನೆ ಇಲಾಖೆಯ ತಂತ್ರಾಂಶ ಸಹಾಯದಿಂದ ರೈತರು ಪರಿಹಾರ ಪಡೆದುಕೊಳ್ಳಬೇಕು’ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗಂಗಾಧರ ತಿಳಿಸಿದರು.

ನಗರದ ಪಶುಸಂಗೋಪನಾ ಆಸ್ಪತ್ರೆಯ ಆವರಣದಲ್ಲಿ ನಡೆದ ಇಲಾಖೆಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

‘ವನ್ಯ ಜೀವಿಗಳ ದಾಳಿಯಿಂದ ದನಕರುಗಳು ಸತ್ತರೆ ₹35 ಸಾವಿರ, ಅರಣ್ಯ ಇಲಾಖೆಯಿಂದ ಹಾಗೂ ವಿದ್ಯುತ್ ಅಪಘಾತದಿಂದ ಸಾವಿಗೀಡಾದರೆ ₹50 ಸಾವಿರ ಪರಿಹಾರಧನ ಜೆಸ್ಕಾಂ ಇಲಾಖೆಯಿಂದ ದೊರೆಯುತ್ತದೆ. ಅಪಘಾತದಲ್ಲಿ ದನಕರುಗಳು ಸತ್ತರೆ ಪರಿಹಾರಧನ ₹15 ಸಾವಿರ ದೊರೆಯುತ್ತದೆ, ಒಂದು ಕುರಿಸತ್ತರೆ ₹7,500ದವರೆಗೆ, ಕುರಿಮರಿ ಸತ್ತರೆ ₹5 ಸಾವಿರ ಪರಿಹಾರಧನ ದೊರೆಯುತ್ತದೆ. ಈ ಬಗ್ಗೆ ನಮ್ಮ ಇಲಾಖೆಯ ಸಿಬ್ಬಂದಿಯು ರೈತರಿಗೆ ಮತ್ತು ಕುರಿಗಾರರಿಗೆ ಮಾಹಿತಿಯನ್ನು ನೀಡಲಾಗಿದೆ’ ಎಂದರು.

ADVERTISEMENT

ತಾಲ್ಲೂಕಿನಲ್ಲಿ ನಾಯಿಗಳ ಕಡಿತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಿಸಲು ಸಮಾಜ ಸೇವಾ ಸಂಸ್ಥೆಗಳು, ಸ್ಥಳೀಯ ಸರ್ಕಾರಿ ಸಂಸ್ಥೆಗಳ ಸಹಕಾರದೊಂದಿಗೆ ಮಾಡಲು ಅವಕಾಶವಿರುತ್ತದೆ. ನಾಯಿಗಳ ಕಡಿತ ತಪ್ಪಿಸಲು ಸಂತಾನ ಹರಣ ಚಿಕಿತ್ಸೆ ಮಹತ್ವವನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಬೇಕು.

ಪಶುಸಂಗೋಪನೆ ಇಲಾಖೆಯ ಮೇಲ್ವಿಚಾರಕ ಟಿ.ಹುಚ್ಚೀರಪ್ಪ, ಪಶುವೈದ್ಯ ಕುಬೇರಪ್ಪ, ಮತ್ತು ವಿವಿಧ ಗ್ರಾಮಗಳ ಪಶು ಸಕಿಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.