ADVERTISEMENT

ತೆಕ್ಕಲಕೋಟೆ: ಅನಧಿಕೃತ ನೀರಾವರಿ ಯೋಜನೆ ಆರೋಪ

ರೈತರ ವಿರೋಧ: ಜೆಸಿಬಿ ಯಂತ್ರ, ಪೈಪ್ ಲೈನ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:05 IST
Last Updated 1 ಜುಲೈ 2025, 13:05 IST
ತೆಕ್ಕಲಕೋಟೆ ಬಳಿಯ ತುಂಗಭದ್ರಾ ಕೆಳಮಟ್ಟದ ಕಾಲುವೆಯ ಬಾಗೇವಾಡಿ ಉಪಕಾಲುವೆ ಪಕ್ಕ ಪೈಪ್ ಲೈನ್ ಹಾಕುತ್ತಿದ್ದ ಜೆಸಿಬಿ ಯಂತ್ರವನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡರು
ತೆಕ್ಕಲಕೋಟೆ ಬಳಿಯ ತುಂಗಭದ್ರಾ ಕೆಳಮಟ್ಟದ ಕಾಲುವೆಯ ಬಾಗೇವಾಡಿ ಉಪಕಾಲುವೆ ಪಕ್ಕ ಪೈಪ್ ಲೈನ್ ಹಾಕುತ್ತಿದ್ದ ಜೆಸಿಬಿ ಯಂತ್ರವನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡರು   

ತೆಕ್ಕಲಕೋಟೆ: ಇಲ್ಲಿನ ತುಂಗಭದ್ರಾ ಕೆಳಮಟ್ಟದ (ಎಲ್ಎಲ್‌ಸಿ) ಕಾಲುವೆಯ ಬಾಗೇವಾಡಿ ಉಪಕಾಲುವೆ ಪಕ್ಕದಿಂದ ಭೈರಾಪುರ ಗ್ರಾಮದ ರೈತರು ಅನಧಿಕೃತವಾಗಿ ಪೈಪ್ ಲೈನ್ ಹಾಕುತ್ತಿದ್ದಾರೆ ಎಂದು ಆರೋಪಿಸಿದ ಘಟನೆ ಮಂಗಳವಾರ ನಡೆದಿದೆ.

ಈ ಕುರಿತು ಮಾತನಾಡಿದ ನೀರಾವರಿ ಬಳಕೆದಾರರ ಸಂಘದ ಅಧ್ಯಕ್ಷ ಬಂದೇ ನವಾಜ್, ‘ಕಾಲುವೆಯ ಪಕ್ಕದಲ್ಲಿ ಪೈಪ್ ಲೈನ್ ಹಾಕುವ ಮೂಲಕ ಕಾಲುವೆಯಿಂದ ಅನಧಿಕೃತವಾಗಿ ನೀರು ಪಡೆಯುವ ದುರುದ್ದೇಶ ಇದೆ. ಇದನ್ನು ನಾವು ವಿರೋಧಿಸುತ್ತೇವೆ’ ಎಂದು ಹೇಳಿದರು.

ಬಾಗೇವಾಡಿ ಕಾಲುವೆ ಬಳಿಯಿಂದ ಗೋಸಬಾಳು ಗ್ರಾಮದವರೆಗೆ ಏತ ನೀರಾವರಿ ಯೋಜನೆ ಅಡಿಯಲ್ಲಿ ₹65 ಲಕ್ಷ ವೆಚ್ಚದ ಕಾಮಗಾರಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಕಾಮಗಾರಿ ನಡೆಸುತ್ತಿರುವುದಾಗಿ ಭೈರಾಪುರ ಗ್ರಾಮದ ರೈತ ಬಸವನಗೌಡ ತಿಳಿಸಿದರು.

ADVERTISEMENT

ಜೆಸಿಬಿ ಯಂತ್ರ ಹಾಗೂ ಪೈಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರೈತ ಮುಖಂಡರಾದ ನೆಣಿಕೆಪ್ಪ, ಶಾಷಾವಲಿ, ನಾಗಪ್ಪ, ಬಿ. ಚಂದ್ರ ನಾಯಕ್, ಬಿ. ಶ್ರೀನಿವಾಸ, ಎಚ್. ರಾಜ, ಜಿ. ಸಿದ್ದಯ್ಯ, ಇಸೂಬ್ ಇದ್ದರು.

ತೋಡು ಮಾಳ ಹಳ್ಳದಿಂದ ಗೋಸಬಾಳು ಗ್ರಾಮದವರೆಗೆ ಪೈಪ್ ಲೈನ್ ಹಾಕುವ ಕಾರ್ಯ ನಡೆಯುತ್ತಿದ್ದು ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಪೊಲೀಸ್ ಇಲಾಖೆ ಸಹಕಾರದಿಂದ ಕಾಮಗಾರಿ ನಿಲ್ಲಿಸಲಾಗಿದೆ
ತಿಪ್ಪೇಸ್ವಾಮಿ ಸಿರುಗುಪ್ಪ ನೀರಾವರಿ ಇಲಾಖೆ ಎಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.