ADVERTISEMENT

ರಾಣಿಪೇಟೆಯಲ್ಲಿ ಕರಡಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 12:48 IST
Last Updated 6 ಜೂನ್ 2022, 12:48 IST
ಹೊಸಪೇಟೆಯ ರಾಣಿಪೇಟೆಯ ಮನೆಯೊಂದರ ಸಜ್ಜಾ ಮೇಲೆ ಕುಳಿತಿದ್ದ ಕರಡಿಯನ್ನು ಅರಣ್ಯ ಇಲಾಖೆಯವರು ಸೋಮವಾರ ರಕ್ಷಿಸಿ ಕಾಡೊಳಗೆ ಬಿಟ್ಟರು
ಹೊಸಪೇಟೆಯ ರಾಣಿಪೇಟೆಯ ಮನೆಯೊಂದರ ಸಜ್ಜಾ ಮೇಲೆ ಕುಳಿತಿದ್ದ ಕರಡಿಯನ್ನು ಅರಣ್ಯ ಇಲಾಖೆಯವರು ಸೋಮವಾರ ರಕ್ಷಿಸಿ ಕಾಡೊಳಗೆ ಬಿಟ್ಟರು   

ಹೊಸಪೇಟೆ (ವಿಜಯನಗರ): ನಗರದ ಹೃದಯಭಾಗದ ರಾಣಿಪೇಟೆ ಜನತೆಗೆ ಸೋಮವಾರ ಬೆಳಗಿನ ಜಾವ ಆಶ್ಚರ್ಯ ಹಾಗೂ ಆತಂಕ ಕಾದಿತ್ತು.

ನಸುಕಿನ ಜಾವ 5.30ಕ್ಕೆ ಅವರ ಕಾಲೊನಿಗೆ ಕರಡಿ ನುಗ್ಗಿತ್ತು. ವಿಷಯ ಗೊತ್ತಾಗಿ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ಕೊಟ್ಟರು. ಬಲೆ, ಅರವಳಿಕೆ ಸೇರಿದಂತೆ ಇತರೆ ಸುರಕ್ಷತಾ ಸಾಧನಗಳನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ತಂಡ 6.45ಕ್ಕೆ ರಾಣಿಪೇಟೆಗೆ ಬಂತು. ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ವೈದ್ಯೆ ವಾಣಿ ಅವರು ಕರಡಿಗೆ ಅರವಳಿಕೆ ಕೊಟ್ಟರು. ಬಳಿಕ ಅದನ್ನು ವಾಹನದಲ್ಲಿ ವಾಜಪೇಯಿ ಉದ್ಯಾನಕ್ಕೆ ಕರೆದೊಯ್ದು, ಮಧ್ಯಾಹ್ನ ಆರೋಗ್ಯ ಪರೀಕ್ಷಿಸಲಾಯಿತು. ನಂತರ ಕಾಡಿಗೆ ಬಿಡಲಾಯಿತು.

‘4ರಿಂದ 5 ವರ್ಷದ ಹೆಣ್ಣು ಕರಡಿ ರಾಣಿಪೇಟೆಗೆ ಬಂದಿತ್ತು. ಬೆಳಗಿನ ಜಾವ ಬಂದದ್ದರಿಂದ ಯಾರು ಎದುರಾಗದ ಕಾರಣ ಕರಡಿ ದಾಳಿ ನಡೆಸಿಲ್ಲ. ವಿಷಯ ತಿಳದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಕರಡಿಯನ್ನು ಸುರಕ್ಷಿತವಾಗಿ ಕಾಡೊಳಗೆ ಬಿಡಲಾಗಿದೆ. ಬಸವನದುರ್ಗ, ಧರ್ಮದಗುಡ್ಡ ಭಾಗದಿಂದ ಕರಡಿ ಬಂದಿರುವ ಸಾಧ್ಯತೆ ಇದೆ. ಆದರೆ, ಹೆಚ್ಚು ಜನವಸತಿ ಪ್ರದೇಶಕ್ಕೆ ಅದು ಹೇಗೆ ಬಂತು ಎನ್ನುವುದು ಗೊತ್ತಾಗಿಲ್ಲ’ ಎಂದು ವಲಯ ಅರಣ್ಯ ಅಧಿಕಾರಿ ಕೆ.ಸಿ. ವಿನಯ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.