ADVERTISEMENT

ಲಾರಿ ಹರಿದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 16:16 IST
Last Updated 9 ಏಪ್ರಿಲ್ 2021, 16:16 IST

ಹೊಸಪೇಟೆ (ವಿಜಯನಗರ): ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶುಕ್ರವಾರ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದದ್ದರಿಂದ ಹತ್ತು ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

‘ಎಂ.ಪಿ. ಪ್ರಕಾಶ್‌ ನಗರದ ಸಾಯಿ ಕಾಲೊನಿ ನಿವಾಸಿ ಮಣಿಕಂಠ ಮೃತ ಬಾಲಕ. ಬಾಲಕ ಬಡಾವಣೆಯಿಂದ ಅಷ್ಟು ದೂರ ಬೈಸಿಕಲ್‌ ಮೇಲೆ ಹೆದ್ದಾರಿಗೇಕೇ ಹೋಗಿದ್ದ. ಅಲ್ಲಿ ಅಪಘಾತ ಹೇಗೆ ಸಂಭವಿಸಿತು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT