ಹೊಸಪೇಟೆ (ವಿಜಯನಗರ): ‘ಬುದ್ಧಿಜೀವಿಗಳನ್ನು ಲದ್ದಿಜೀವಿಗಳು, ಗಂಜಿ ಗಿರಾಕಿಗಳು ಎಂದು ಹಂಗಿಸುವವರಿಗೆ ಮತ್ತು ಜಾತಿವಾದಿಗಳಿಗೆ ಬುದ್ಧಿಜೀವಿಗಳ ಬಗ್ಗೆ ಭಯವಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಹೇಳಿದರು.
ಅಕಾಡೆಮಿ ವತಿಯಿಂದ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲಬುರಗಿ ವಿಭಾಗ ಮಟ್ಟದ ಯುವ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜ ಕಟ್ಟುವ ಬುದ್ಧಿಜೀವಿಗಳನ್ನು ಮತ್ತು ಬರಹಗಾರರನ್ನು ಬೇರೆ ಬೇರೆ ಕಾರಣಕ್ಕೆ ಗುರಿಪಡಿಸಲಾಗುತ್ತದೆ’ ಎಂದರು.
‘ಸಂವಿಧಾನ, ಸೌಹಾರ್ದದ ಪರ ಮಾತನಾಡುವವರನ್ನು ಉಳಿಸಬಾರದು ಎಂಬ ಸ್ಥಿತಿ ಇದೆ. ಲೇಖಕರ ಮೇಲೆ ಹಲ್ಲೆ ಕೊಲೆಗಳು ಆಗುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಈಗ ಯುವ ಕವಿಗಳು ಪ್ರೀತಿ, ಪ್ರೇಮ, ಪ್ರಣಯದ ವಿಷಯಗಳಿಗಿಂತ ಕಾಲದ ಮನೋಧರ್ಮಕ್ಕೆ ಸ್ಪಂದಿಸುತ್ತಾರೆ. ಅಂಥವರಿಗೆ ತೊಂದರೆಯಾದರೆ ಯಾರು ಹೊಣೆ? ಅವರನ್ನು ಪ್ರೋತ್ಸಾಹಿಸಬೇಕಾದ ಹಿರಿಯರು ಹೊಣೆಗೇಡಿಗಳು ಆಗಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.