ADVERTISEMENT

ಹೊಸಪೇಟೆ: ಯುವಕರ ಮೇಲಿನ ಲಾಠಿ ಪ್ರಹಾರಕ್ಕೆ ಖಂಡನೆ

ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 12:16 IST
Last Updated 18 ಆಗಸ್ಟ್ 2021, 12:16 IST

ಹೊಸಪೇಟೆ (ವಿಜಯನಗರ): ಉದ್ಯೋಗ ಕೊಡುವಂತೆ ಆಗ್ರಹಿಸಿ ಮಧ್ಯ ಪ್ರದೇಶದಲ್ಲಿ ಯುವಕರು ನಡೆಸುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಅವರ ಮೇಲೆ ಲಾಠಿ ಪ್ರಹಾರ ನಡೆಸಿರುವುದು ತೀವ್ರ ಖಂಡನಾರ್ಹ ಎಂದು ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ ತಿಳಿಸಿದೆ.

‘ಮಧ್ಯಪ್ರದೇಶದಲ್ಲಿ ಬುಧವಾರ ನಿರುದ್ಯೋಗವನ್ನು ವಿರೋಧಿಸಿ ಮತ್ತು ಉದ್ಯೋಗ ಕೊಡುವಂತೆ ಆಗ್ರಹಿಸಿ ‘ಆಲ್ ಇಂಡಿಯಾ ಡೆಮೊಕ್ರಟಿಕ್ ಯೂತ್ ಆರ್ಗನೈಸೇಷನ್’ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯು ಅತ್ಯಂತ ಶಾಂತಿಯುತವಾಗಿ ನಡೆಯುತ್ತಿತ್ತು. ಪೊಲೀಸರು ಏಕಾಏಕಿ ಅವರ ಮೇಲೆ ಲಾಠಿ ಪ್ರಹಾರ ನಡೆಸಿ ಬಂಧಿಸಿರುವುದು ಸರಿಯಲ್ಲ’ ಎಂದು ಸಂಘಟನೆಯ ಮುಖಂಡ ಎನ್‌.ಎಲ್‌. ಪಂಪಾಪತಿ ತಿಳಿಸಿದ್ದಾರೆ.

‘ಸರ್ಕಾರ ತನ್ನ ಈ ನಡೆಗೆ ಕ್ಷಮೆ ಯಾಚಿಸಬೇಕು. ಬಂಧಿತ ಪ್ರತಿಭಟನಾ ನಿರತರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.