ಹೊಸಪೇಟೆ: ದರೋಜಿ ಕರಡಿಧಾಮವನ್ನು ವಿಶ್ವವಿಖ್ಯಾತಗೊಳ್ಳಲು ಕಾರಣರಾದ ನಿವೃತ್ತ ಅರಣ್ಯ ಅಧಿಕಾರಿ ಸಂಗಮೇಶ ಎನ್. ಮಠ (70) ಭಾನುವಾರ ಹುನಗುಂದದಲ್ಲಿ ನಿಧನರಾದರು.
‘ವಲಯ ಅರಣ್ಯಾಧಿಕಾರಿಯಾಗಿ ದರೋಜಿ ಕರಡಿಧಾಮಕ್ಕಾಗಿ ಅವರು ಮಾಡಿದ ಕೆಲಸದಿಂದಾಗಿಯೇ ಹಾಡು ಹಗಲಿನಲ್ಲಿಯೇ ಕರಡಿಗಳನ್ನು ನೋಡುವಂತಾಗಿದ್ದು, ಹಗಲು ರಾತ್ರಿಯೆನ್ನದೆ ಕಾಡು ಮತ್ತು ಕರಡಿಗಳ ಸಂರಕ್ಷಣೆಗಾಗಿ ಓಡಾಡುತ್ತಿದ್ದರು’ ಎಂದು ವನ್ಯಜೀವಿ ಸಂರಕ್ಷಕ ಸಮದ್ ಕೊಟ್ಟೂರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.