ADVERTISEMENT

ಕೂಡ್ಲಿಗಿ | ಲಾರಿಗೆ ಡಿಕ್ಕಿ: ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:32 IST
Last Updated 4 ಜುಲೈ 2025, 15:32 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕೂಡ್ಲಿಗಿ: ತಾಲ್ಲೂಕಿನ ಕೈವಲ್ಯಾಪುರ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಚಾಲಕ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ADVERTISEMENT

ತಮಿಳು ನಾಡಿನ ತೂತುಕುಡಿಯ ಸುಡಲೈ (50) ಎಂಬುವವರು ಮೃತರು.

ಆಂಧ್ರದ ತೈಲೂರಿನಿಂದ ಮಾವಿನ ಹಣ್ಣಿನ ಟ್ರೇಗಳನ್ನು ತುಂಬಿಕೊಂಡು ಮುಂಬೈಗೆ ಹೊರಟಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಕೈವಲ್ಯಾಪುರ ಬಳಿ ಬರುತ್ತಿದ್ದಾಗ ಹಿಂಬದಿಯ ಟೈರ್ ಪಂಕ್ಚರ್ ಆಗಿದ್ದರಿಂದ ಲಾರಿಯನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಚಿತ್ರದುರ್ಗ ಕಡೆಯಿಂದ ಬಂದ ಲಾರಿಯು ಹಿಂಬದಿಗೆ ಡಿಕ್ಕಿ ಹೊಡೆದಿದೆ. ಕೆ. ಸರವಣ್ ಈ ಲಾರಿಯನ್ನು ಚಾಲನೆ ಮಾಡುತ್ತಿದ್ದರು. ಸುಡಲೈ ಅದೇ ಲಾರಿಯಲ್ಲಿದ್ದರು.

ನಿಂತಿದ್ದ ಲಾರಿಯ ಚಾಲಕ ಬಿ. ರವೀಂದ್ರ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.