ADVERTISEMENT

ಹೊಸಪೇಟೆ: 33ನೇ ದಿನಕ್ಕೆ ಕಾಲಿಟ್ಟ ಧರಣಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 11:13 IST
Last Updated 12 ಜನವರಿ 2022, 11:13 IST
ಹೊಸಪೇಟೆಯಲ್ಲಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಜೆಡಿಎಸ್‌ ಮುಖಂಡರು ಬುಧವಾರ ಅದರಲ್ಲಿ ಪಾಲ್ಗೊಂಡಿದ್ದರು
ಹೊಸಪೇಟೆಯಲ್ಲಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಜೆಡಿಎಸ್‌ ಮುಖಂಡರು ಬುಧವಾರ ಅದರಲ್ಲಿ ಪಾಲ್ಗೊಂಡಿದ್ದರು   

ಹೊಸಪೇಟೆ (ವಿಜಯನಗರ): ಸೇವೆ ಕಾಯಂಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅತಿಥಿ ಉಪನ್ಯಾಸಕರು ನಗರದಲ್ಲಿ ನಡೆಸುತ್ತಿರುವ ಧರಣಿ ಬುಧವಾರ 33 ದಿನಗಳನ್ನು ಪೂರೈಸಿತು.

ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಕೆ. ಕೊಟ್ರೇಶ್‌ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ಬಳಿಕ ಮಾತನಾಡಿ, ‘ಸರ್ಕಾರ ಅತಿಥಿ ಉಪನ್ಯಾಸಕರಿಗೆ ಶೋಷಣೆ ಮಾಡುತ್ತಿದೆ. ಅವರ ಹೋರಾಟಕ್ಕೆ ಕಿವಿಗೊಡದೆ ನಿರ್ಲಕ್ಷ್ಯ ಧೋರಣೆ ತಾಳಿರುವುದು ಸರಿಯಲ್ಲ‘ ಎಂದು ಟೀಕಿಸಿದರು.

ಜೆ.ಡಿ.ಎಸ್ ಮುಖಂಡರಾದ ಬಿ.ಎಂ. ಸೋಮಶೇಖರ್, ಅಬ್ದುಲ್ ಸಲೀಂ, ವಿಜಯನಗರ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಪಿ.ವಿಜಯಕುಮಾರ, ಗೌರವ ಅಧ್ಯಕ್ಷ ಎರ್ರಿಸ್ವಾಮಿ, ಕಾರ್ಯದರ್ಶಿ ಅಕ್ಕಿ ಮಲ್ಲಿಕಾರ್ಜುನ, ಸಂದೀಪ ಡಿ.ಡಿ, ಚೌಡೇಶ್, ಹನುಮನಗೌಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.