ಹರಪನಹಳ್ಳಿ: ಮೀಸಲಿಟ್ಟ ಅರಣ್ಯ ಪ್ರದೇಶದಲ್ಲಿ ಕುರಿ, ಜಾನುವಾರ ಮೇಯಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಕುರಿಗಾಹಿಗಳು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
‘ಹಲುವಾಗಲು ಗ್ರಾಮದ ವ್ಯಾಪ್ತಿಯಲ್ಲಿ ಕುರಿ, ಮೇಕೆ, ಜಾನುವಾರು ಮೇವಿಗೆ ಪರದಾಡುತ್ತಿವೆ. ಹಾಗಾಗಿ ಗ್ರಾಮದ ವ್ಯಾಪ್ತಿಯ ಮೀಸಲಿಟ್ಟಿರುವ ಅರಣ್ಯ ಪ್ರದೇಶದಲ್ಲಿ ಕುರಿ, ಮೇಕೆ ಮೇಯಿಸಲು ಅವಕಾಶ ನೀಡಬೇಕು’ ವಲಯ ಅರಣ್ಯಾಧಿಕಾರಿ ರಾಜು ಗೋವಂದ್ಕರ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ತಹಶೀಲ್ದಾರ್ ಬಿ.ವಿ.ಗಿರೀಶಬಾಬು ಅವರಿಗೂ ಮನವಿ ಸಲ್ಲಿಸಲಾಯಿತು. ಮುಖಂಡರಾದ ವೈ.ಕೆ.ಬಿ. ದುರುಗಪ್ಪ, ವಸಂತಪ್ಪ, ದ್ಯಾಮಪ್ಪ, ಬಸವರಾಜ್ ಹುಲಿಯಪ್ಪನವರ್, ಗಂಗಪ್ಪ, ಗುರುರಾಜ್, ಪರಸಪ್ಪ, ಭಂಡಾರಿ ನಾಗರಾಜ್, ನಿಂಗರಾಜ್, ರುದ್ರಪ್ಪ, ಸುನೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.