ADVERTISEMENT

ಹೊಸಪೇಟೆ: ತಂದೆಯ ಸಾವಿನ ನೋವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 15:25 IST
Last Updated 29 ಮಾರ್ಚ್ 2025, 15:25 IST
ಹರಿಧರನ್‌
ಹರಿಧರನ್‌   

ಹೊಸಪೇಟೆ (ವಿಜಯನಗರ): ನಗರದ ತುಂಗಭದ್ರ ಅಣೆಕಟ್ಟೆಯ ಸಂತ ಜೋಸೆಫ್ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಹರಿಧರನ್‌, ತಂದೆಯ ಸಾವಿನ ದುಃಖದಲ್ಲೂ ಶನಿವಾರ ‘ಸಮಾಜ ವಿಜ್ಞಾನ’ ವಿಷಯದ ಪರೀಕ್ಷೆ ಬರೆದರು.

ಇವರ ತಂದೆ ಸೆಲ್ವಕುಟ್ಟಿ ಮೂತ್ರಪಿಂಡಕ್ಕೆ ಸಂಬಂಧಿಸಿ ತಮಿಳುನಾಡಿನ ಧರ್ಮಪುರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಮೃತಪಟ್ಟರು. ಹರಿಧರನ್ ಆಸ್ಪತ್ರೆಗೆ ತೆರಳಿ, ಅಂತಿಮದರ್ಶನ ಪಡೆದು, ಶನಿವಾರ ಮರಳಿ ಬಂದು ಪರೀಕ್ಷೆ ಬರೆದರು’ ಎಂದು ಸ್ಥಳೀಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT