ADVERTISEMENT

ಹೊಸಪೇಟೆ ಪ್ರಥಮ ದರ್ಜೆ ಕಾಲೇಜು ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 13:20 IST
Last Updated 1 ಫೆಬ್ರುವರಿ 2023, 13:20 IST
‘ನ್ಯಾಕ್‌’ ಸಮಿತಿಯಿಂದ ಪ್ರಮಾಣ ಪತ್ರ ಸ್ವೀಕರಿಸಿದ ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ನಟರಾಜ ಪಾಟೀಲ, ಐಕ್ಯುಎಸಿ ಸಂಚಾಲಕ ಟಿ.ಎಚ್‌. ಬಸವರಾಜ
‘ನ್ಯಾಕ್‌’ ಸಮಿತಿಯಿಂದ ಪ್ರಮಾಣ ಪತ್ರ ಸ್ವೀಕರಿಸಿದ ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ನಟರಾಜ ಪಾಟೀಲ, ಐಕ್ಯುಎಸಿ ಸಂಚಾಲಕ ಟಿ.ಎಚ್‌. ಬಸವರಾಜ   

ಹೊಸಪೇಟೆ (ವಿಜಯನಗರ): ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ‘ನ್ಯಾಕ್‌’ ಮಾನ್ಯತೆಯಲ್ಲಿ ಕಲಬುರಗಿ ವಿಭಾಗದಲ್ಲೇ ಅತ್ಯುತ್ತಮ ಸಾಧನೆ ತೋರಿದೆ.

ಕಾಲೇಜಿನ ಸಾಧನೆ ನೋಡಿ ‘ನ್ಯಾಕ್‌’ ಸಮಿತಿ ಬಿ++ ಗ್ರೇಡ್‌ ನೀಡಿದೆ. ಕಾಲೇಜು ಪ್ರಾರಂಭವಾದ ಹದಿನೈದು ವರ್ಷಗಳ ನಂತರ ಸಿಬ್ಬಂದಿ, ವಿದ್ಯಾರ್ಥಿಗಳ ಶ್ರಮದಿಂದ ಈ ಗೌರವ ದೊರೆತಿದೆ. ‘ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಸಿಬ್ಬಂದಿಯ ಶ್ರಮದಿಂದ ಕಾಲೇಜಿಗೆ ಬಿ++ ಗ್ರೇಡ್‌ ದೊರೆತಿದೆ. ಇದು ಬಹಳ ಸಂತೋಷದ ವಿಷಯ’ ಎಂದು ಪ್ರಾಚಾರ್ಯ ನಟರಾಜ ಪಾಟೀಲ ತಿಳಿಸಿದ್ದಾರೆ.

ನ್ಯಾಕ್‌ ಮತ್ತು ಐಕ್ಯುಎಸಿ ಘಟಕಗಳ ಸಂಚಾಲಕ ಟಿ.ಎಚ್‌. ಬಸವರಾಜ ಇಡೀ ಪ್ರಕ್ರಿಯೆಯ ನೇತೃತ್ವ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.