ADVERTISEMENT

‘ಜ್ಞಾನ ವೃದ್ಧಿಗೆ ವಿಜ್ಙಾನ ವಸ್ತು ಪ್ರದರ್ಶನಗಳು ಸಹಕಾರಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 13:23 IST
Last Updated 22 ನವೆಂಬರ್ 2023, 13:23 IST
ಕೊಟ್ಟೂರಿನ ಪ್ರೌಢ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ವಿಜ್ಙಾನ ವಸ್ತು ಪ್ರದರ್ಶನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಹಾಗೂ ಶಿಕ್ಷಕರು ವೀಕ್ಷಿಸಿದರು
ಕೊಟ್ಟೂರಿನ ಪ್ರೌಢ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ವಿಜ್ಙಾನ ವಸ್ತು ಪ್ರದರ್ಶನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಹಾಗೂ ಶಿಕ್ಷಕರು ವೀಕ್ಷಿಸಿದರು   

ಕೊಟ್ಟೂರು: ವಿದ್ಯಾರ್ಥಿಗಳ ಜ್ಙಾನ ವೃದ್ಧಿಗೆ ವಿಜ್ಙಾನ ವಸ್ತು ಪ್ರದರ್ಶನಗಳು ಸಹಕಾರಿಯಾಗುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಹೇಳಿದರು.

ಪಟ್ಟಣದ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲಾ ವಿಭಾಗದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಜ್ಙಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಙಾನದ ಬೆಳವಣಿಗೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು ವಿಜ್ಙಾನ ಕ್ಷೇತ್ರದತ್ತ ಒಲವು ತೋರಿಸಿ ಕುತೂಹಲ ಮತ್ತು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಎಚ್.ಎನ್.ವೀರಭದ್ರಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ವಿಜ್ಙಾನದಿಂದ ಜಗತ್ತು ನಡೆಯುವುದರಿಂದ ವಿದ್ಯಾರ್ಥಿಗಳು ವಿಜ್ಞಾನ ಕ್ರೇತ್ರದ ಕಡೆ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮೊಳಗಿನ ಸುಪ್ತ ಪ್ರತಿಭೆ ಪ್ರದರ್ಶಿಸಿರುವುದನ್ನು ವಿಜ್ಞಾನ ಆಸಕ್ತರು, ಪಾಲಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಡಯಟ್ ಉಪನ್ಯಾಸಕ ಪ್ರಭುರಾಜ್ ಪಾಟೀಲ್, ಇಂದು ಪದವಿ ಕಾಲೇಜು ಪ್ರಾಂಶುಪಾಲ ಪಿ.ಎಂ.ವಾಗೀಶಯ್ಯ, ಸಿಆರ್‌ಪಿ ರವಿಕುಮಾರ್, ಅಜ್ಜಯ್ಯ ಹಾಗೂ ಸಿದ್ದಪ್ಪ, ಪತ್ರೇಶ್, ಹರೀಶ್ ಗೌಡ, ರವೀಂದ್ರ ಮಂಜುನಾಥ್, ನಾಗರಾಜ್ ,ಸಂದೀಪ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.