ADVERTISEMENT

ಹರಪನಹಳ್ಳಿ | ಕಂದಾಯ ವಸೂಲಾತಿಗೆ ಆದ್ಯತೆ: ಉಮೇಶ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 12:38 IST
Last Updated 16 ಜನವರಿ 2025, 12:38 IST
ಹರಪನಹಳ್ಳಿ ತಾಲ್ಲೂಕು ಅಣಜಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಸಾಮಾನ್ಯ ಸಭೆ ಜರುಗಿತು
ಹರಪನಹಳ್ಳಿ ತಾಲ್ಲೂಕು ಅಣಜಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಸಾಮಾನ್ಯ ಸಭೆ ಜರುಗಿತು   

ಹರಪನಹಳ್ಳಿ: ‘ಪ್ರತಿ ಹಳ್ಳಿಯಲ್ಲೂ ಕಂದಾಯ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಹೇಳಿದರು.

ತಾಲ್ಲೂಕಿನ ಅಣಜಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಏಳು ಹಳ್ಳಿಯಲ್ಲಿ ಕಂದಾಯ ವಸೂಲಾತಿ ಅಭಿಯಾನ ನಡೆಯುತ್ತಿದೆ. ನರೇಗಾ ಯೋಜನೆಯಡಿ ಜನರು ದನದ ಕೊಟ್ಟಿಗೆ, ಬದು ನಿರ್ಮಾಣ, ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕು’ ಮನವಿ ಮಾಡಿದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ.ಎಂ.ರವೀಂದ್ರ, ಸದಸ್ಯರಾದ ಟಿ.ಶಿವಣ್ಣ, ಯು.ಮಂಜುನಾಥ, ಕೆ.ಡಿ.ಮರಿಯಪ್ಪ, ಕಿರಣ್ ಕುಮಾರ, ಕೆ.ಬಸವರಾಜ, ಎಂ.ಸುನಿತಾ, ಕೆ.ಸುಧಾ, ನೇತ್ರಾ, ಕೆ.ರುದ್ರಪ್ಪ, ಜ್ಯೋತಿ, ಇಟಗಿ ಮಂಜಮ್ಮ, ಜಯಮ್ಮ, ಆರ್.ಸಿದ್ದೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.