ADVERTISEMENT

ಬಿರುಗಾಳಿ ಸಮೇತ ಬಿರುಸು ಮಳೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 16:20 IST
Last Updated 21 ಮೇ 2021, 16:20 IST
ಹೊಸಪೇಟೆ ತಾಲ್ಲೂಕಿನ ಹಂಪಿಯಲ್ಲಿ ಶುಕ್ರವಾರ ಸಂಜೆ ಬಿರುಗಾಳಿ ಸಮೇತ ಜೋರು ಮಳೆಯಾಗಿದ್ದರಿಂದ ಬಾಳೆಗಿಡ, ತೆಂಗಿನ ಮರಗಳು ಬಾಗಿದ್ದವು
ಹೊಸಪೇಟೆ ತಾಲ್ಲೂಕಿನ ಹಂಪಿಯಲ್ಲಿ ಶುಕ್ರವಾರ ಸಂಜೆ ಬಿರುಗಾಳಿ ಸಮೇತ ಜೋರು ಮಳೆಯಾಗಿದ್ದರಿಂದ ಬಾಳೆಗಿಡ, ತೆಂಗಿನ ಮರಗಳು ಬಾಗಿದ್ದವು   

ಹೊಸಪೇಟೆ (ವಿಜಯನಗರ): ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಶುಕ್ರವಾರ ಸಂಜೆ ಬಿರುಸಿನ ಮಳೆಯಾಗಿದೆ.

ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಂಪುರ ಸುತ್ತಮುತ್ತ ಸಂಜೆ ಐದು ಗಂಟೆಗೆ ಬಿರುಗಾಳಿ ಸಮೇತ ಜೋರು ಮಳೆಯಾಗಿದೆ. ಗಂಟೆಗೂ ಹೆಚ್ಚು ಸಮಯ ಸತತ ವರ್ಷಧಾರೆಯಾಗಿದೆ. ಸಂಜೆ ಏಳು ಗಂಟೆ ವೇಳೆಗೆ ನಗರದಲ್ಲೂ ಮಳೆ ಸುರಿದಿದೆ. ರಾತ್ರಿ 8.15ರ ನಂತರವೂ ಜಿಟಿಜಿಟಿ ಮಳೆ ಮುಂದುವರೆದಿತ್ತು.

ಗುರುವಾರದಿಂದ ತಾಪಮಾನದಲ್ಲಿ ಹೆಚ್ಚಳವಾಗಿದ್ದರಿಂದ ಬಿಸಿಲು, ಸೆಕೆಯಿಂದ ಜನ ಬಳಲುತ್ತಿದ್ದರು. ಮಳೆಯಿಂದ ವಾತಾವರಣ ಸ್ವಲ್ಪ ತಂಪಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.