ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಗುಂಡ್ಲುವದ್ದಿಗೇರಿಯ ಸೀತಾರಾಮಚಂದ್ರ ಮತ್ತು ಪಾಂಡುರಂಗ ದೇವಸ್ಥಾನದಲ್ಲಿ 50ನೇ ವರ್ಷದ ಶ್ರೀರಾಮ ನಾಮತಾರಕ ಮಹಾಮಂತ್ರ ಸಪ್ತಾಹ ಬುಧವಾರ ನಡೆದಿದ್ದು, ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಪುರಪ್ರವೇಶ ಮಾಡಿ ಭಕ್ತರಿಗೆ ಆಶೀರ್ವಚನ ನೀಡಿದರು.
‘ಸಮಾಜದಲ್ಲಿ ಧರ್ಮ ಪ್ರಜ್ಞೆ ಇರಬೇಕು, ಶ್ರೀರಾಮ ನಾಮತಾರಕ ಮಹಾಮಂತ್ರ ಪಠಣ ಸಾಮೂಹಿಕವಾಗಿ ನಡೆದಾಗ ಅದರ ಶಕ್ತಿ ಮಹೋನ್ನತವಾದುದು. ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು’ ಎಂದು ಶ್ರೀಗಳು ಆಶಿಸಿದರು.
ಇದಕ್ಕೆ ಮೊದಲು ಸಾಮೂಹಿಕ ಭಜನೆಯಲ್ಲೂ ಪಾಲ್ಗೊಂಡ ಶ್ರೀಗಳು, ಶ್ರೀರಾಮ ನಾಮತಾರಕ ಮಹಾಮಂತ್ರ ಸಪ್ತಾಹ ನಡೆಸುವ ನಿಟ್ಟಿನಲ್ಲಿ ಊರಿನ ಸಂಘಟಿತ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.