ADVERTISEMENT

ಕೂಡ್ಲಿಗಿ: ಮನೆ ಬಾಗಿಲಿಗೆ ಸಿದ್ದರಾಮಯ್ಯ ಚಿತ್ರ ಕೆತ್ತನೆ ಮಾಡಿಸಿದ ದಂಪತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 20:20 IST
Last Updated 16 ಸೆಪ್ಟೆಂಬರ್ 2025, 20:20 IST
<div class="paragraphs"><p>ಮಲ್ಲೇಶಪ್ಪ ತಿಪ್ಪೇಸ್ವಾಮಿ ಮತ್ತು ಪಾರ್ವತಿ ದಂಪತಿ ತಮ್ಮ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತ್ರವುಳ್ಳ ಬಾಗಿಲನ್ನು ಅಳವಡಿಸಿಕೊಂಡಿದ್ದಾರೆ</p></div>

ಮಲ್ಲೇಶಪ್ಪ ತಿಪ್ಪೇಸ್ವಾಮಿ ಮತ್ತು ಪಾರ್ವತಿ ದಂಪತಿ ತಮ್ಮ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತ್ರವುಳ್ಳ ಬಾಗಿಲನ್ನು ಅಳವಡಿಸಿಕೊಂಡಿದ್ದಾರೆ

   

ಕೂಡ್ಲಿಗಿ: ತಾಲ್ಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ಮಲ್ಲೇಶಪ್ಪ ತಿಪ್ಪೇಸ್ವಾಮಿ ಹಾಗೂ ಪಾರ್ವತಿ ದಂಪತಿ ಮನೆಯ ಬಾಗಿಲಿನ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತ್ರವನ್ನು ಕೆತ್ತನೆ ಮಾಡಿದ್ದಾರೆ.

‘ಗೃಹಲಕ್ಷ್ಮಿ ಯೋಜನೆಯಲ್ಲಿ ಪಾರ್ವತಮ್ಮ ಅವರಿಗೆ ₹ 30 ಸಾವಿರ ಸಂದಾಯವಾಗಿತ್ತು. ಅದನ್ನು ಯಾವುದಕ್ಕೂ ಬಳಸಿರಲಿಲ್ಲ. ಈಗ ಅದನ್ನು ಬಳಸಿ ಬಾಗಿಲಿಗೆ ಸಿದ್ದರಾಮಯ್ಯ ಚಿತ್ರ ಕೆತ್ತಿಸಲಾಗಿದೆ. ಇದಕ್ಕೆ ₹ 28 ಸಾವಿರ ಖರ್ಚಾಯಿತು. ಇದೆಲ್ಲವೂ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಮಾಡಿದ್ದು’ ಎಂದು ಮಲ್ಲೇಶಪ್ಪ ತಿಪ್ಪೇಸ್ವಾಮಿ ತಿಳಿಸಿದರು.

ADVERTISEMENT

‘ಹಳೇ ಬಾಗಿಲನ್ನು ತೆಗೆದು ಹಾಕಿ, ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ಹೊಸ ಬಾಗಿಲು ಮನೆಗೆ ಅಳವಡಿಸಿದ್ದೇವೆ. ಊರಲ್ಲಿ ಹಬ್ಬವಿರುವ ಕಾರಣಕ್ಕೆ ಪೂಜೆ ಸಲ್ಲಿಸಿದೆವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.