ADVERTISEMENT

ಹಾವು ಕಡಿದು ರೈತ ಸಾವು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 14:59 IST
Last Updated 27 ಏಪ್ರಿಲ್ 2025, 14:59 IST
ಹುಲುಗಪ್ಪ
ಹುಲುಗಪ್ಪ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಹೊಸೂರು ಗ್ರಾಮದ ಗದ್ದೆಯೊಂದರಲ್ಲಿ ಮೇವು ಕಟಾವು ಮಾಡುವ ವೇಳೆ ವಿಷಪೂರಿತ ಹಾವೊಂದು ಕಚ್ಚಿದ್ದರಿಂದ ರೈತ ಹುಲುಗಪ್ಪ (35) ಮೃತಪಟ್ಟಿದ್ದಾರೆ.

ಶನಿವಾರ ಬೆಳಿಗ್ಗೆ ಮೇವು ತರಲೆಂದು ಹುಲುಗಪ್ಪ ಗದ್ದೆಗೆ ಹೋಗಿದ್ದರು. ಸಂಜೆಯಾದರೂ ಮನೆಗೆ ಬಾರದೆ ಇದ್ದಾಗ ಮನೆ ಮಂದಿ ಹುಡುಕಿಕೊಂಡು ಗದ್ದೆಯತ್ತ ತೆರಳಿದಾಗ ಅವರು ಅಲ್ಲಿ ಬಿದ್ದಿರುವುದು ಕಂಡಿತು. ಅವರು ಮೂರ್ಛೆ ಹೋಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಶಾಸಕ ಎಚ್.ಆರ್.ಗವಿಯಪ್ಪ ಆಸ್ಪತ್ರೆಗೆ ತೆರಳಿ ಕುಟುಂಬವರಿಗೆ ಸಾಂತ್ವನ ಹೇಳಿದ್ದು, ಸರ್ಕಾರದಿಂದ ಸಿಗಬಹುದಾದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.