ADVERTISEMENT

ಕೂಡ್ಲಿಗಿ: ಮೊಬೈಲ್‌ ಬಳಸದಂತೆ ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 14:23 IST
Last Updated 6 ಜುಲೈ 2022, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೂಡ್ಲಿಗಿ: ಹೆಚ್ಚು ಮೊಬೈಲ್ ಬಳಸದಂತೆ ಪೋಷಕರು ಬುದ್ಧಿ ವಾದ ಹೇಳಿದ್ದಕ್ಕೆ ಮನನೊಂದ ಮಗ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹಾಲಸಾಗರದಲ್ಲಿ ಬುಧವಾರ ನಡೆದಿದೆ.

ಮೃತ ಉಮೇಶ್‌ (17) ಬಳ್ಳಾರಿಯ ಎಸ್.ಜಿ. ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ. ‘ಮೊಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯದೇ ಓದಿನ ಕಡೆಗೆ ಗಮನ ಹರಿಸಬೇಕೆಂದು ಪೋಷಕರು, ಉಮೇಶ್‌ಗೆ ಬುದ್ಧಿಮಾತು ಹೇಳಿದ್ದರು. ಅದರಿಂದ ನೊಂದು ಜು. 4ರಂದು ಉಮೇಶ್ ಮನೆ ಬಿಟ್ಟು ಹೋಗಿದ್ದ. ಬುಧವಾರ ಗ್ರಾಮದ ಹೊರವಲಯದ ಜಯಣ್ಣ ಗೌಡ್ರು ಎಂಬುವರ ಬಾವಿಯಲ್ಲಿ ಶವ ತೇಲಾಡುತ್ತಿತ್ತು. ಸ್ಥಳೀಯರು ವಿಷಯ ತಿಳಿಸಿದ ನಂತರ ಪೊಲೀಸರು ಬಂದು, ಮೃತನ ಗುರುತು ಪತ್ತೆ ಹಚ್ಚಿದ್ದಾರೆ. ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT