
ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸುವ ಕೆಲಸ ಬುಧವಾರ ಬೆಳಿಗ್ಗೆ ಆರಂಭವಾಯಿತು.
ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ, ಅಧೀಕ್ಷಕ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ಉಪಸ್ಥಿತಿಯಲ್ಲಿ ಅಹಮದಾಬಾದ್‌ನ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮೆಷಿನರಿ ಪ್ರೊಜೆಕ್ಟ್ ಕಂಪನಿಯ ತಜ್ಞರು ಗೇಟ್ ಅಳವಡಿಸುವ ಕೆಲಸ ಆರಂಭಿಸಿದರು.
ಮೊದಲಿಗೆ 18ನೇ ಗೇಟ್‌ಗೆ ಅಳವಡಿಸುವ ಕೆಲಸ ಆರಂಭವಾಗಿದ್ದು, ಕ್ರೇನ್ ಮೂಲಕ ಎಂಡ್ ಗೇಟ್‌ಗಳನ್ನು ತರಲಾಗಿದೆ. ಡಿ.5ರಿಂದ ಇದುವರೆಗೂ ಏಳು ಹಳೆ ಗೇಟ್‌ಗಳ ಅರ್ಧ ಭಾಗವನ್ನು ಕತ್ತರಿಸಿ ತೆಗೆಯಲಾಗಿದೆ.
ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಸ್ತುತ 43 ಟಿಎಂಸಿ ಅಡಿ ಹಾಗೂ ಅಣೆಕಟ್ಟೆಯ ನೀರಿನ ಮಟ್ಟ 1,612.62 ಅಡಿಗೆ (ಗರಿಷ್ಠ 1,633) ಕುಸಿದಿದೆ. ಗೇಟ್ ಅಳವಡಿಕೆಗೆ ಇದ್ದ ತೊಡಕು ಬಗೆಹರಿದಿದೆ. ನೀರಿನ ಮಟ್ಟ ತಗ್ಗಿರುವ ಕಾರಣ ನದಿಗೆ ನೀರು ಹರಿಸುವುದನ್ನು ನಿಲ್ಲಿಸಿದ್ದು, ಕಾಲುವೆಗಳಿಗಷ್ಟೇ ಹರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.