ADVERTISEMENT

ತುಂಗಭದ್ರಾ ಅಣೆಕಟ್ಟೆಯ 32 ಗೇಟ್‌ ಬದಲು: ಟೆಂಡರ್ ಅವಧಿ 1 ವಾರ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 13:41 IST
Last Updated 28 ಏಪ್ರಿಲ್ 2025, 13:41 IST
<div class="paragraphs"><p>ತುಂಗಭದ್ರಾ ಅಣೆಕಟ್ಟೆ</p></div>

ತುಂಗಭದ್ರಾ ಅಣೆಕಟ್ಟೆ

   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 32 ಕ್ರಸ್ಟ್‌ಗೇಟ್‌ಗಳನ್ನು ಬದಲಿಸಲು ಕರೆಯಲಾಗಿದ್ದ ಟೆಂಡರ್‌ ಅವಧಿಯನ್ನು ಒಂದು ವಾರ ವಿಸ್ತರಿಸಲಾಗಿದೆ.

‘ಇ–ಟೆಂಡರ್‌ ಸೋಮವಾರ ತೆರೆಯಬೇಕಿತ್ತು. ಆದರೆ, ₹60 ಕೋಟಿಗೂ ಹೆಚ್ಚು ವೆಚ್ಚದ ದೊಡ್ಡ ಕಾಮಗಾರಿ ನಿಭಾಯಿಸುವ ಸಮರ್ಥ ಕಂಪನಿಗಳು ಟೆಂಡರ್‌ನಲ್ಲಿ ಪಾಲ್ಗೊಂಡಿಲ್ಲ. ಅದಕ್ಕೆ ಅದರ ಅವಧಿ ಒಂದು ವಾರ ಮುಂದಕ್ಕೆ ಹಾಕಲಾಗಿದೆ. ಮೇ 5ರಂದು ಟೆಂಡರ್ ತೆರೆಯಲಾಗುವುದು’ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಈ ಮಧ್ಯೆ, 33ನೇ ಗೇಟ್ ಅಳವಡಿಕೆಗೆ ಸಂಬಂಧಿಸಿದಂತೆ ಅಹಮದಾಬಾದ್‌ನ ಹಾರ್ಡ್‌ವೇರ್‌ ಟೂಲ್ಸ್‌ ಆ್ಯಂಡ್‌ ಮೆಷಿನರಿ ಪ್ರಾಜೆಕ್ಟ್ ಕಂಪನಿ ಗೇಟ್‌ನ ವಿನ್ಯಾಸವನ್ನು ತುಂಗಭದ್ರಾ ಮಂಡಳಿಗೆ ಸಲ್ಲಿಸಿ ಒಪ್ಪಿಗೆ ಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಮಂಡಳಿಯಿಂದ ಸಮ್ಮತಿ ಸಿಕ್ಕರೆ, ಮೇ ಎರಡನೇ ವಾರದಲ್ಲಿ ಗೇಟ್ ಅಳವಡಿಕೆ ಕಾಮಗಾರಿ ನಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.