ADVERTISEMENT

ವಾಲ್ಮೀಕಿ ಶ್ಲೋಕಕ್ಕೆ ಹಾಡಿನ ರೂಪ: ಬಾಪು ಪದ್ಮನಾಭ ರಾಗ ಸಂಯೋಜನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 10:04 IST
Last Updated 17 ಅಕ್ಟೋಬರ್ 2021, 10:04 IST
ಹೊಸಪೇಟೆಯಲ್ಲಿ ಬಾನುವಾರ ನಡೆದ ಸುದ್ದಿಗೋಷ್ಠಿ
ಹೊಸಪೇಟೆಯಲ್ಲಿ ಬಾನುವಾರ ನಡೆದ ಸುದ್ದಿಗೋಷ್ಠಿ   

ಹೊಸಪೇಟೆ: ಮಹರ್ಷಿ ವಾಲ್ಮೀಕಿ ರಚಿಸಿರುವ ಶ್ಲೋಕಕ್ಕೆ ನಿರ್ದೇಶಕ ಬಾಪು ಪದ್ಮನಾಭ ಹಾಗೂ ಗಾಯಕ ಎಸ್.ಎಸ್.ಚಂದ್ರಶೇಖರ್ ಅವರು ರಾಗ ಸಂಯೋಜಿಸಿ ಹಾಡಿನ ರೂಪ ಕೊಟ್ಟಿದ್ದಾರೆ.

ಮಹರ್ಷಿ ವಾಲ್ಮೀಕಿಯವರ 'ಕೂಜಂತಂ ರಾಮ ರಾಮೇತಿ, ಮಧುರಂ ಮಧುರಾಕ್ಷರಂ' ಎಂಬ ಶ್ಲೋಕಕ್ಕೆ ಬಾಪು ಪದ್ಮನಾಭ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಎಸ್.ಎಸ್.ಚಂದ್ರಶೇಖರ್ ಮತ್ತು ಬಾಪು ಪದ್ಮನಾಭ ಹಾಡಿಗೆ ದನಿಯಾಗಿದ್ದಾರೆ.

‘ಜಗತ್ತು ಇರುವವರೆಗೂ ರಾಮಾಯಣದ ಎಲ್ಲ ಪಾತ್ರಗಳನ್ನು ನೆನೆಯುವುದರ ಜೊತೆ ರಾಮಾಯಣ ಸೃಷ್ಟಿಸಿದ ವಾಲ್ಮೀಕಿಯನ್ನು ನೆನೆಯಬೇಕು. ವಾಲ್ಮೀಕಿಯವರ ಶ್ಲೋಕವನ್ನು ರಾಗದ ರೂಪದಲ್ಲಿ ಹೊರತಂದಿದ್ದು ಬಹಳ ವಿಶೇಷ. ವಿವಿಧ ಶರಣರ ವಚನಗಳಿಗೆ ರಾಗ ಸಂಯೋಜನೆ ಮಾಡಿರುವ ಖ್ಯಾತ ಸಂಗೀತ ನಿರ್ದೇಶಕ ಬಾಪು ಪದ್ಮನಾಭ ಅವರು ಈ ಶ್ಲೋಕವನ್ನು ಗೀತೆಯ ಮೂಲಕ ಎಲ್ಲರಿಗೂ ಪರಿಚಯಿಸೋಣ ಎಂದು ನಿರ್ಧರಿಸಿ ಹಾಡನ್ನು ಹೊರತರುತ್ತಿದ್ದಾರೆ’ ಎಂದು ಗಾಯಕ ಚಂದ್ರಶೇಖರ್‌ ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಅ.20ರಂದು ನಡೆಯಲಿರುವ ವಾಲ್ಮೀಕಿ ಜಯಂತಿಯಲ್ಲಿ ‘ಅಂತರ್ದನಿ’ ಯೂಟ್ಯೂಬ್ ಚಾನೆಲ್ ಮೂಲಕ ಲೋಕಾರ್ಪಣೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ರಾಮಾಯಣದ 108 ಶ್ಲೋಕಗಳಿಗೆ ರಾಗ ಸಂಯೋಜಿಸಿ ಬಿಡುಗಡೆ ಮಾಡುವ ಯೋಜನೆ ಇದೆ’ ಎಂದು ಹೇಳಿದರು.

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ನಾಣಿಕೇರಿ ತಿಮ್ಮಯ್ಯ, ಮುಖಂಡರಾದ ಬಂಡೆ ರಂಗಪ್ಪ, ಯಮನೂರಪ್ಪ, ಕನಕಪ್ಪ, ಕಂಪ್ಲಿ ಕಣಿಮೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.