ADVERTISEMENT

ವಿಜಯನಗರ: ಹೃದಯ ಪರೀಕ್ಷೆಯತ್ತ ರೋಟರಿ ಚಿತ್ತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:23 IST
Last Updated 4 ಜುಲೈ 2025, 15:23 IST
ಕೆ.ಎಸ್‌.ದಾದಾಪೀರ್‌
ಕೆ.ಎಸ್‌.ದಾದಾಪೀರ್‌   

ಹೊಸಪೇಟೆ (ವಿಜಯನಗರ): ‘ಈಚಿನ ದಿನಗಳಲ್ಲಿ ಯುವಜನತೆ ಹೃದಯಾಘಾತಕ್ಕೆ ಒಳಗಾಗಿ ಸಾಯುವ ಪ್ರಸಂಗ ಹೆಚ್ಚಾಗುತ್ತಿದ್ದು, ನಗರದಲ್ಲಿ ಹೃದಯ ಚಿಕಿತ್ಸೆಯತ್ತ ರೋಟರಿ ಹೆಚ್ಚಿನ ಗಮನ ಹರಿಸಲಿದೆ, ವೊಕಾರ್ಡ್‌ ಅಥವಾ ನಾರಾಯಣ ಹೃದಯಾಲಯದ ತಜ್ಞರನ್ನು ಕರೆಸಿ ತಪಾಸಣೆ ನಡೆಸಲು ಪ್ರಯತ್ನ ಮಾಡಲಿದ್ದೇವೆ’ ಎಂದು ನೂತನ ಅಧ್ಯಕ್ಷ ಕೆ.ಎಸ್‌.ದಾದಾಪೀರ್ ಹೇಳಿದರು.

ಶನಿವಾರ ಸಂಜೆ ಇಲ್ಲಿನ ಮಲ್ಲಿಗೆ ಹೋಟೆಲ್‌ ಸಭಾಂಗಣದಲ್ಲಿ ನಡೆಯಲಿರುವ ರೋಟರಿ ಪದಗ್ರಹಣ ಸಮಾರಂಭದ ಪ್ರಯುಕ್ತ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

‘ತಜ್ಞ ವೈದ್ಯರು ಸಿಗದ ಕಾರಣಕ್ಕೆ ಈ ಯೋಜನೆ ವಿಳಂಬವಾಗಿತ್ತು, ಆದರೆ ಇದೀಗ ಪರಿಸ್ಥಿತಿ ಬಿಗಡಾಯಿಸುತ್ತಿದೆ, ಆ ಯೋಜನೆಯನ್ನು ತ್ವರಿತಗೊಳಿಸಲು ಪ್ರಯತ್ನಿಸಲಿದ್ದೇವೆ’ ಎಂದರು.

ADVERTISEMENT

‘ಗರ್ಭಕಂಠ ಕ್ಯಾನ್ಸರ್ ನಿಯಂತ್ರಿಸುವ ಸಲುವಾಗಿ 20 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಎಚ್‌ಪಿವಿ ಲಸಿಕೆ ನೀಡುವ ಮತ್ತು ಅದರ ಕುರಿತಾಗಿ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು ಹೆಚ್ಚಿಸಲಾಗುವುದು, 1 ಲಕ್ಷ ಬೀಜದ ಉಂಡೆ ತಯಾರಿಸಿ ಅರಣ್ಯ ಮತ್ತು ಗಣಿ ಪ್ರದೇಶಗಳಲ್ಲಿ ಎಸೆಯಲಾಗುವುದು’ ಎಂದರು.

ನೂತನ ಕಾರ್ಯದರ್ಶಿ ಎಂ.ಡಿ.ಕೇದಾರೇಶ್ವರ ಮಾತನಾಡಿ, ‘ಸೈಯದ್ ನಾಜಿಮುದ್ದೀನ್‌ ಅವರು ರೋಟರಿ ಪದಗ್ರಹಣ ಹಾಗೂ ಜಯಶ್ರೀ ಸಾಗರ್‌ ಇನ್ನರ್‌ವೀಲ್‌ ಪದಗ್ರಹಣ ನೆರವೇರಿಸಲಿದ್ದಾರೆ. ನೈಮಿಷಾ ಅವರು ಇನ್ನರ್‌ವೀಲ್ ನೂತನ ಅಧ್ಯಕ್ಷೆ ಹಾಗೂ ಆರತಿ ರಾಜಾಪುರ ಅವರು ಕಾರ್ಯದರ್ಶಿಯಾಗಿದ್ದಾರೆ’ ಎಂದರು.

ರೋಟರಿಯ ಪ್ರಮುಖರಾದ ಅಬ್ದುಲ್‌ ಹಕ್‌ ಸೇಠ್‌, ಸತ್ಯನಾರಾಯಣ, ವಿಜಯ್ ಸಿಂದಗಿ, ದೀಪಕ್‌ ಕೊಳಗದ್‌, ಅಶ್ವಿನ್‌ ಕೋತಂಬರಿ ಇದ್ದರು.

ಡಾ.ಎಂ.ಡಿ.ಕೇದರೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.