ADVERTISEMENT

ಮತದಾನ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 11:12 IST
Last Updated 27 ಮಾರ್ಚ್ 2023, 11:12 IST
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದ ಬಳಿ ಸೋಮವಾರ ಮತದಾನ ಜಾಗೃತಿ ಜಾಥಾ ನಡೆಯಿತು
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದ ಬಳಿ ಸೋಮವಾರ ಮತದಾನ ಜಾಗೃತಿ ಜಾಥಾ ನಡೆಯಿತು   

ಹೊಸಪೇಟೆ (ವಿಜಯನಗರ): ವಿಶ್ವ ರಂಗಭೂಮಿ ದಿನದ ಅಂಗವಾಗಿ ಭಾವೈಕ್ಯತಾ ವೇದಿಕೆ ಟ್ರಸ್ಟ್‌ನಿಂದ ಮತದಾನ ಜಾಗೃತಿ ಅಭಿಯಾನ ನಗರದಲ್ಲಿ ಸೋಮವಾರ ಜರುಗಿತು.

ನಗರದ ಟೌನ್‌ ರೀಡಿಂಗ್ ರೂಂನಿಂದ ಮಹಾತ್ಮ ಗಾಂಧೀಜಿ ಪ್ರತಿಮೆ ವರೆಗೆ ಜಾಥಾ ನಡೆಸಲಾಯಿತು. ಪಿ.ವಿ.ಎಸ್‌.ಬಿ.ಸಿ ಶಾಲಾ ಮಕ್ಕಳು, ಭಾವೈಕ್ಯತಾ ವೇದಿಕೆ ಟ್ರಸ್ಟ್‌ನವರು ಪಾಲ್ಗೊಂಡಿದ್ದರು.

ಟ್ರಸ್ಟ್‌ ಸಂಚಾಲಕ ಅಬ್ದುಲ್‌ ಪಿಂಜಾರ ಮಾತನಾಡಿ, ವಿಶ್ವ ರಂಗಭೂಮಿ ದಿನದ ಅಂಗವಾಗಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಂಗಭೂಮಿಗೆ ನಿರ್ದಿಷ್ಟವಾದ ವ್ಯಾಪ್ತಿ, ಹರವು ಇಲ್ಲ. ಅದರ ನಾನಾ ಪ್ರಕಾರಗಳಿವೆ. ರಂಗಭೂಮಿ ಪ್ರತಿಯೊಂದರಲ್ಲೂ ಅಡಕವಾಗಿದೆ. ಮನುಷ್ಯನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಅಂಶಗಳು ಅದರಲ್ಲಿವೆ ಎಂದು ಹೇಳಿದರು.

ADVERTISEMENT

ಬರುವ ದಿನಗಳಲ್ಲಿ ಬೀದಿ ನಾಟಕಗಳ ಮೂಲಕ ಮತದಾನದ ಮಹತ್ವ ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಬೀದಿ ನಾಟಕಗಳ ಮೂಲಕ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಅದರಲ್ಲಿ ಚುನಾವಣೆ ಮತ್ತು ಮತದ ಮಹತ್ವ ಸಾರಲಾಗುವುದು ಎಂದು ತಿಳಿಸಿದರು.

ವೇದಿಕೆಯ ಯೂನುಸ್‌, ಪಿವಿಎಸ್‌ಬಿಸಿ ಶಾಲೆಯ ಶಿಕ್ಷಕ ಎತ್ನಳ್ಳಿ ಮಲ್ಲಯ್ಯ, ನಿರೂಪಕಿ ಅಮೃತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.