ADVERTISEMENT

ಅಪಾಯ ಆಹ್ವಾನಿಸುವ ಸೇತುವೆ ರಸ್ತೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 4:55 IST
Last Updated 22 ಜೂನ್ 2011, 4:55 IST

ಕೊಲ್ಹಾರ: ಹತ್ತಾರು ಪ್ರಮುಖ ಗ್ರಾಮಗಳನ್ನು ಸಂಪರ್ಕಿಸುವ  ಹಣಮಾಪುರ ಜಾಕ್‌ವೆಲ್‌ನ ಸೇತುವೆ ರಸ್ತೆಯ ಎರಡೂ ಬದಿಗಳಲ್ಲಿ ತಗ್ಗು ಬಿದ್ದಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಅಂದಾಜು ಮೂರು ಕಿ.ಮೀ. ಉದ್ದದ ಈ ರಸ್ತೆಯು ಹಣಮಾಪುರ- ಬಾಗಾನಗರ ಮಧ್ಯೆ ಇದ್ದು, ಗುಣಮಟ್ಟ ದಿಂದ ಕೂಡಿದ್ದರೂ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ದಿನನಿತ್ಯ ಆಲಮಟ್ಟಿ, ತಳೆವಾಡ, ಅರಷಣಗಿ, ಚಿ
ಮ್ಮಲಗಿ ಗ್ರಾಮಗಳಿಗೆ ಹೋಗಲು ಇದೇ ರಸ್ತೆ ಅವಲಂಬಿಸಬೇಕು.

ರಸ್ತೆ ದೂರದಿಂದ ನೋಡಲು ಚೆನ್ನಾಗಿಯೇ ಕಂಡರೂ ವಾಹನ ಚಾಲಕರು ಹತ್ತಿರಕ್ಕೆ ಬಂದಾಗಲೇ ಅಪಾಯದ ಗಂಭೀರತೆ ಧುತ್ತೆಂದು ಎದುರಾಗುತ್ತದೆ. ಜಾಗರೂಕತೆ ತಪ್ಪಿದರೆ ತಲುಪುವುದು ಸೇತುವೆಯ ಪಕ್ಕದಲ್ಲಿ ಇರುವ ಆಳವಾದ ಕಂದಕಕ್ಕೆ.!

ಈ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು ಮೂರರಿಂದ ನಾಲ್ಕು ಅಡಿಗಳಷ್ಟು ತಗ್ಗು ಬಿದ್ದಿದ್ದು ಸೇತುವೆ ಮೇಲೆ ವಾಹನಗಳು ಎದುರು ಬದುರಾದರೆ ಅಪಾಯ ತಪ್ಪಿದ್ದಲ್ಲ. ಇಲ್ಲಿ ದೊಡ್ಡ ಅನಾಹುತ ಆಗುವುದಕ್ಕಿಂತ ಮುಂಚೆ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಸೇತುವೆಯ ಪಕ್ಕ ಬಿದ್ದಿರುವ ಆಳವಾದ ತಗ್ಗುಗಳನ್ನು ಸರಿಪಡಿಸಿ, ಪ್ರಯಾಣಿಕರ ಹಿತವನ್ನು ಕಾಪಾಡಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.