ADVERTISEMENT

ಇಂಡಿಯಲ್ಲಿ ಬೃಹತ್ ಪ್ರತಿಭಟನೆ ಇಂದು

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 5:45 IST
Last Updated 6 ಜೂನ್ 2011, 5:45 IST

ಇಂಡಿ: ಸಂತ ರಾಮದೇವ್ ಬಾಬಾ ಅವರನ್ನು ಬಂಧಿಸಿದ ಕೇಂದ್ರ ಸರಕಾರದ ವಿರುದ್ಧ ಇದೇ 6ರಂದು ಬೆಳಿಗ್ಗೆ 11 ಗಂಟೆಗೆ ಇಂಡಿ ಪಟ್ಟಣದಲ್ಲಿ ಪ್ರಭಾಕರ ಬಗಲಿ, ಶ್ರೆಪತಿಗೌಡ ಬಿರಾದಾರ, ಸಂಜೀವ ಭೈರಶೆಟ್ಟಿ, ಎಸ್.ಟಿ.ಪಾಟೀಲ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿ ಕೊಳ್ಳಲಾಗಿದೆ.

ಸಂತ ರಾಮದೇವ್ ಗುರೂಜಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮತ್ತು ವಿದೇಶದಲ್ಲಿಟ್ಟಿರುವ ಹಣ ವಾಪಸ್ ಬರಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಮೇಲೆ ಕೇಂದ್ರ ಸರಕಾರದ ಆದೇಶದ ಮೇರೆಗೆ  ಪೋಲಿಸರು ಏಕಾಏಕಿ ದಾಳಿ ಮಾಡಿರುವ ಘಟನೆಯನ್ನು ಮೆರವಣಿಗೆ ಯಲ್ಲಿ ಖಂಡಿಸಲಾಗುವುದು.   

ಮೆರವಣಿಗೆಯು ಪಟ್ಟಣದ ನಿರೀಕ್ಷಣಾ ಮಂದಿರದಿಂದ ಪ್ರಾರಂಭ ವಾಗಿ ಬಸವೇಶ್ವರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಹಾಯ್ದು ಮಹಾವೀರ ಸರ್ಕಲ್ ಮತ್ತು ಕಚೇರಿ ರಸ್ತೆ ಮೂಲಕ ಸಾಗಿ ತಹಸೀಲ್ದಾರ ಕಚೇರಿಗೆ ತಲುಪಿ ಅಲ್ಲಿ ತಹಸೀಲ್ದಾರರಿಗೆ ಮನವಿ ಪತ್ರ ಅರ್ಪಿಸಲಾಗುವುದು ಎಂದು ಶ್ರೆಪತಿಗೌಡ ಬಿರಾದಾರ, ಪ್ರಬಾಕರ ಬಗಲಿ, ಸಂಜೀವ ಭೈರಶೆಟ್ಟಿ ಹಾಗೂ ಎಸ್.ಟಿ.ಪಾಟೀಲ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.