ADVERTISEMENT

ಎಟ್ಕೊ ಡೆನಿಮ್‌ ಕಾರ್ಮಿಕರು, ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 5:43 IST
Last Updated 10 ಜನವರಿ 2014, 5:43 IST

ವಿಜಾಪುರ: ತಮ್ಮ ಕಂಪನಿಯ ಆಡಳಿತ ಮಂಡಳಿಯವರು ಸರಿಯಾದ ಸಂಬಳ ನೀಡದೆ ತಾರತಮ್ಯ ನೀತಿ ಅನುಸರಿಸು ತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿಯ ಎಟ್ಕೊ ಡೆನಿಮ್‌ ಕಂಪನಿಯ ಕಾರ್ಮಿಕರು, ಮನೆಗಳ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಸ್ಥಳೀಯ ಹಮಾಲ ಕಾಲೊನಿಯ ನಿವಾಸಿಗಳು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ನೌಕರರ ಒಕ್ಕೂಟ ದವರು ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಕಾರ್ಮಿಕರು: ಇಲ್ಲಿಯ ಎಟ್ಕೊ ಡೆನಿಮ್‌ ಕಂಪನಿಯಲ್ಲಿ ಮೂರು ವರ್ಷ ಗಳಿಂದ 200 ಜನರು ಕೆಲಸ ಮಾಡು ತ್ತಿದ್ದು, ತಮಗೆ ಕೇವಲ ರೂ. 3,500 ಸಂಬಳ ನೀಲಾಗುತ್ತಿದೆ. ಹೊರ ರಾಜ್ಯದ ಕೆಲಸಗಾರರಿಗೆ ರೂ. 12 ರಿಂದ ರೂ. 13,000 ಸಂಬಳ ನೀಡುತ್ತಿದ್ದು, ಯಾವುದೇ ಸೌಲಭ್ಯ ನೀಡದೆ ತಾರತಮ್ಯ ನೀತಿ ಅನು ಸರಿಸಲಾಗುತ್ತಿದೆ ಎಂದು ಆರೋಪಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

‘ಕಾರ್ಖಾನೆಯ ಆಡಳಿತ ಮಂಡಳಿ ಯವರು ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡಿ, ಭಯದ ವಾತಾವರಣ ನಿರ್ಮಿಸಿದ್ದಾರೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ನವ ನಿರ್ಮಾಣ ವೇದಿಕೆಯ ಅಧ್ಯಕ್ಷ ಶೇಷ ರಾವ್‌ ಮಾನೆ, ಸಿಐಟಿಯುನ ಲಕ್ಷ್ಮಣ ಹಂದ್ರಾಳ, ಸೋಮಪ್ಪ ಆಯಟ್ಟಿ, ಕಾರ್ಮಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದು ಶಿಂಧೆ ದೂರಿದರು.

ಕಂಪನಿಯವರು ನೇಮಕಾತಿ ಪತ್ರ ನೀಡಿಲ್ಲ. ಕನಿಷ್ಠ ವೇತನ, ಪಿಎಫ್‌, ಇಎಸ್‌ಐ ಸೌಲಭ್ಯ ನೀಡುತ್ತಿಲ್ಲ. ಸರ್ಕಾರಿ ನಿಯಮದ ಪ್ರಕಾರ ವೇತನ, ರಜೆ ಮತ್ತಿತರ ಸೌಲಭ್ಯ ನೀಡಬೇಕು. ಕೆಲಸದ ಸಮಯದಲ್ಲಿ ಸುರಕ್ಷತೆಗೆ ಉಪಕರಣ ಪೂರೈಸಬೇಕು. ಪ್ರತಿ ವರ್ಷ ಬೋನಸ್‌ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನೌಕರರ ಒಕ್ಕೂಟ: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾ ಸಮಿತಿಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೌಕರರ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಇಲ್ಲಿ ಪ್ರತಿಭಟನೆ ನಡೆಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಲೆಂಡಿ, ‘ರಾಜ್ಯ ಸರ್ಕಾರ ಎಸ್ಮಾ ಕಾಯ್ದೆ ಜಾರಿಗೆ ತಂದಿದೆ. ನೌಕರರ ವಿರೋಧಿಯಾಗಿರುವ ಈ ಕಾನೂನು ಹಾಗೂ ಪಿಂಚಣಿ ಖಾಸ ಗೀಕರಣ ಮಸೂದೆಯನ್ನು ಕೂಡಲೇ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಸುರೇಶ ಜೆ.ಬಿ.  ಖಾಲಿಯಿರುವ 1.81 ಲಕ್ಷ ಸರ್ಕಾರಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಸರ್ಕಾರಿ ಸೇವೆಗಳಲ್ಲಿ ಗುತ್ತಿಗೆ ಆಧಾರದ ನೇಮಕಾತಿ ಪದ್ಧತಿ ಕೈಬಿಡಬೇಕು ಎಂದರು.

ಒಕ್ಕೂಟದ ಹಿರಿಯ ಉಪಾಧ್ಯಕ್ಷ ಗೋಪಾಲ ಅಥರ್ಗಾ, ಕೋಮುವಾದಿ ಮತ್ತು ಪ್ರತ್ಯೇಕತವಾದಿ ಶಕ್ತಿಗಳನ್ನು ಸೋಲಿಸಲು ಎಲ್ಲ ರೀತಿಯ ಕ್ರಮ ಕೈಗೊ ಳ್ಳಬೇಕು. ಶೇ.50 ರಷ್ಟು ತುಟ್ಟಿ ಭತ್ಯೆ ಯನ್ನು ಮೂಲ ವೇತನದಲ್ಲಿ ವಿಲೀನ ಗೊಳಿಸಬೇಕು. ವೇತನ ತಾರತಮ್ಯ ಹೋಗಲಾಡಿಸಬೇಕು ಎಂದು ಹೇಳಿದರು.

ಬಸವರಾಜ ಮಡಿವಾಳ, ಜಿ.ಬಿ. ಅಂಗಡಿ, ಎಸ್.ಕೆ. ಬಿದನೂರ, ಉದಯ ಕುಲಕರ್ಣಿ, ಎಚ್.ಜಿ. ಸಂಗಾಪುರ, ಅರು ಣಕುಮಾರ, ಸಂತೋಷ ಬಿರಾದಾರ, ಬಸು ಹರಿಜನ, ದೊಡಮನಿ, ಅಶೋಕ ಮೇಲಮನಿ, ಚನ್ನರೆಡ್ಡಿ ಎಮಂಟಿ, ನಿವೃತ್ತ ಪ್ರಾಚಾರ್ಯರು ಎಂ.ಕೆ. ಮನಗೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.