ADVERTISEMENT

ಒಂದೇ ದಿನದಲ್ಲಿ ಮೂಕವ್ವಳ ಮಾಸಾಶನ ಮಂಜೂರು

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 9:31 IST
Last Updated 21 ಜೂನ್ 2013, 9:31 IST

ಮುದ್ದೇಬಿಹಾಳ: ಇಲ್ಲಿನ ಮೂಕವ್ವ ಎಂಬ ಅಂಗವಿಕಲೆಗೆ ಮಾಸಾಶನ ಮಂಜೂರು ಮಾಡಿ ರುವ ತಲಾಠಿ ಸಾಲಿ ಮಠ ಅವರು ಗುರು ವಾರ ಅದನ್ನು ಆಕೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

`ಪ್ರಜಾವಾಣಿ'ಯಲ್ಲಿ ಗುರುವಾರ `ಮಾನವೀಯತೆ ಮೆರೆದ ತಹಶೀಲ್ದಾರ. ಮೂಕವ್ವಳ ಮಾಸಾಶನದ ಭರವಸೆ' ಸುದ್ದಿ ಪ್ರಕಟವಾಗಿತ್ತು. ಅಂದೇ ತಲಾಠಿ ಸಾಲಿಮಠ ಅವರು ಮಾಸಾಶನ ಮಂಜೂರು ಮಾಡಿದ್ದಲ್ಲದೇ ಮಂಜೂ ರಾತಿ ಪತ್ರವನ್ನು ಆಕೆಗೆ ತಲುಪಿಸಿದರು. ಜತೆಗೆ ಅಂಚೆ ಮೂಲಕ ಮಂಜೂರು ಪತ್ರವನ್ನು ಟ್ರೆಜರಿಗೆ ಕಳಿಸುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.