ADVERTISEMENT

ಕಂಪ್ಯೂಟರ್ ಮನುಷ್ಯನ ಅವಿಭಾಜ್ಯ ಅಂಗ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 9:45 IST
Last Updated 2 ಜೂನ್ 2011, 9:45 IST

ವಿಜಾಪುರ: ಕಂಪ್ಯೂಟರ್ ಇಂದು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಅಮೆರಿಕೆಯ ಪೆನುಸೆಲ್ವೆನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ, ವಿಜಾಪುರದ ಬಸನಗೌಡ ಎಂ. ಪಾಟೀಲ ಹೇಳಿದರು.
ತಾಲ್ಲೂಕಿನ ಹೊನಗನಹಳ್ಳಿಯ ಮಂಗಮ್ಮದೇವಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮೂರು ಕಂಪ್ಯೂಟರ್‌ಗಳನ್ನು ದೇಣಿಗೆ ನೀಡಿ ಮಾತನಾಡಿದರು.

ಭಾರತ ಇಂದು ಐಟಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದರೂ ಸಹ ಹಿಂದುಳಿದ ಪ್ರದೇಶದ ಬಹುತೇಕ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತ ರಾಗಿದ್ದಾರೆ. ಅವರನ್ನು ಕಂಪ್ಯೂಟರ್ ಶಿಕ್ಷಣದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ  `ಎಲ್ಲರಿಗೂ ಐಟಿ ಶಿಕ್ಷಣ~ ಎನ್ನುವ ಯೋಜನೆ ಹಾಕಿಕೊಂಡು ಈಗಾಗಲೇ ಬೆಂಗಳೂರಿನ ಸ್ಲಂಗಳಲ್ಲಿ ಸಮಾಜಸೇವಾ ಸಂಸ್ಥೆಗಳ ಸಹಯೋಗ ದಿಂದ ಕಂಪ್ಯೂಟರ್ ಪೂರೈಸಿ ತರಬೇತಿ ನೀಡಲಾಗಿದೆ. ಅಲ್ಲಿಯ ಮಕ್ಕಳು ಕಂಪ್ಯೂಟರ್‌ಗಳನ್ನು ಉತ್ತಮ ವಾಗಿ ಬಳಸುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಉಮೇಶ ಕೋಳಕೂರ ಮಾತನಾಡಿದರು.

ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಆರ್ಥಿಕವಾಗಿ ಮುಗ್ಗಟ್ಟಿನಲ್ಲಿರುವ ಖಾಸಗಿ ಶಾಲೆಗಳು ಕಂಪ್ಯೂಟರ್ ಖರೀದಿಸಲು ಅಶಕ್ತವಾಗಿವೆ. ವಿಜಾಪುರ ತಾಲ್ಲೂಕಿನಲ್ಲಿ ಅಂತಹ ಶಾಲೆಗಳನ್ನು ಗುರುತಿಸಿ ಕಂಪ್ಯೂಟರ್‌ಗಳನ್ನು ದೇಣಿಗೆ ನೀಡುವ ಜೊತೆಗೆ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಮೂಲಕ ಬಸನಗೌಡರು ತಮ್ಮ ಕಾಲೇಜು ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಕಿ ಬಮ್ಮಣಗಿ, ಉಪಾಧ್ಯಕ್ಷೆ ಪ್ರಭಾವತಿ ನಾಟಿಕಾರ, ತಾ.ಪಂ. ಸದಸ್ಯೆ ಸಿದ್ದಮ್ಮ ಮಾದರ, ಮುತ್ತಣ್ಣ ಜಂಗಮಶೆಟ್ಟಿ, ವಿ.ಆರ್. ಬಿರಾದಾರ, ಬಸಣ್ಣ ಬಳ್ಳೂರ, ನಾರಾಯಣ ಬಿದರಿ, ನಾಗಪ್ಪ ಉಮಾಗೋಳ ವೇದಿಕೆಯಲ್ಲಿದ್ದರು.

ಸಂಸ್ಥೆಯ ಅಧ್ಯಕ್ಷ ಎನ್.ಆರ್. ನಾಯಕ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಎಸ್.ಎಸ್. ಸಜ್ಜನ ವಂದಿಸಿದರು. ಶಿಕ್ಷಕ ಎಂ.ಜಿ. ಮಸಳಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.