ADVERTISEMENT

ಜಾನಪದ ಕಲಾ ಪ್ರದರ್ಶನ

ಕಜಾಪ ತಾಲ್ಲೂಕು ಘಟಕ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 6:16 IST
Last Updated 20 ಜುಲೈ 2013, 6:16 IST

ಸಿಂದಗಿ: ಕರ್ನಾಟಕ ಜಾನಪದ ಪರಿಷತ್ತಿನ  ತಾಲ್ಲೂಕು ಘಟಕದ ಉದ್ಘಾಟನೆ  ನಿಮಿತ್ತ ಇದೇ 20 ರಂದು ಮುಂಜಾನೆ 10.30ಕ್ಕೆ  ನಗರದ ಪದ್ಮ ರಾಜ ಡಿಪ್ಲೊಮಾ ಕಾಲೇಜಿನಲ್ಲಿ ಜಾನಪದ ಕಲಾ ಪ್ರದರ್ಶನ ಮತ್ತು ಉಪನ್ಯಾಸ ಮಾಲಿಕೆ ಏರ್ಪಡಿಸಲಾಗಿದೆ.

ಲಿಂ.ಚನ್ನವೀರ ಸ್ವಾಮಿಗಳ ವೇದಿಕೆ ಯಲ್ಲಿ ನಡೆಯಲಿರುವ ಪರಿಷತ್‌ನ ಉದ್ಘಾಟನಾ ಸಮಾರಂಭದ ಸಾನಿಧ್ಯ ವನ್ನು ಸಾರಂಗಮಠದ ಪ್ರಭು ಸಾರಂಗ ದೇವ ಶಿವಾಚಾರ್ಯರು ವಹಿಸುವರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಎನ್. ವಾಲಿ ಅಧ್ಯಕ್ಷತೆ ವಹಿಸುವರು.  ಶಾಸಕ ರಮೇಶ ಭೂಸನೂರ ಪರಿಷತ್ ಘಟಕ ವನ್ನು ಉದ್ಘಾಟಿಸುವರು. ಕರ್ನಾಟಕ ಜಾನಪದ ಪರಿಷತ್ ರಾಜ್ಯ ಘಟಕದ ಸಂಚಾಲಕ ಎಸ್.ಬಾಲಾಜಿ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸುವರು.

ಪರಿಷತ್ ಜಿಲ್ಲಾ ಘಟಕದ ಕಾರ್ಯಾ ಧ್ಯಕ್ಷ ಬಾಳನಗೌಡ ಪಾಟೀಲ ಆಶಯ ಭಾಷಣ ಮಾಡಲಿದ್ದಾರೆ. `ಜಾನಪದ ಬದುಕಿನ ಅವಿಭಾಜ್ಯ ಅಂಗ' ಕುರಿತು ಸಿ.ಎಂ.ಮನಗೂಳಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾ ಪಕ ಬಿ.ಎನ್.ಪಾಟೀಲ ಉಪನ್ಯಾಸ ನೀಡುವರು.

ಮುಖ್ಯ ಅತಿಥಿಗಳಾಗಿ ಜಾನಪದ ವಿದ್ವಾಂಸ ಡಾ.ಎಂ.ಎಂ. ಪಡಶೆಟ್ಟಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ದೇವರಡ್ಡಿ, ಚಂದ್ರಶೇಖರ ನಾಗೂರ, ಪ್ರಾಚಾರ್ಯ ವಿ.ವಿ. ಕಂದೂರ ಮತ್ತು ಪ್ರೊ. ಉಮೇಶ ಕೋಳೆಕರ ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT