ADVERTISEMENT

ಜೀವ ತಿಂದವು ಜಿನುಗು ಹುಳಗಳು!

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:15 IST
Last Updated 20 ಜನವರಿ 2011, 9:15 IST

ಮುದ್ದೇಬಿಹಾಳ: ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಂತರ ಹಿಂಡು ಹಿಂಡಾಗಿ ಕಾಣಿಸಿಕೊಂಡ ಸಣ್ಣ (ಜಿನುಗು) ಹುಳುಗಳು ನಾಗರಿಕರಲ್ಲಿ ಆತಂಕ ಮೂಡಿಸಿದವು. ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿರುವ ಈ ಹುಳುಗಳು ದಾರಿಯಲ್ಲಿ ಹೋಗುವವರ ಕಣ್ಣಲ್ಲಿ ಬಿದ್ದು ಸಮಸ್ಯೆ ಮಾಡಿದವು. 

 ಹುಳುಗಳ ದಿಢೀರ್ ಆಗಮನದಿಂದ ಹೆದರಿದ ಕೆಲವರು, ದೂರವಾಣಿ ಮೂಲಕ ಪುರಸಭೆ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಿ ಆತಂಕ ವ್ಯಕ್ತಪಡಿಸಿದರು.  ‘ಇವು ಏನು? ಹೇಗೆ ಬಂದವು ಎಂಬುದು ನಮಗೂ ಗೊತ್ತಾಗಿಲ್ಲ, ಆದರೆ ಜನರ ಆತಂಕ ದೂರವಾಗಿಸಲು ಈಗಾಗಲೇ ಫಾಗಿಂಗ್ ನಡೆಸಲಾಗಿದೆ. ಹುಳುಗಳನ್ನು ನಿಯಂತ್ರಿಸಲು ಈ ಕಾರ್ಯಾಚರಣೆಯನ್ನು ಸತತ ಮೂರು ದಿನಗಳ ಕಾಲ ಮುಂದುವರಿಸಲಾಗುವುದು. ನಾಳೆಯೇ ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುವುದು’ ಎಂದಿರುವ ಪುರಸಭೆ ಮುಖ್ಯಾಧಿಕಾರಿ ಎಸ್.ಬಿ. ಹೊನ್ನಳ್ಳಿ, ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.