ADVERTISEMENT

ಟಂಟಂ ಉರುಳಿ ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 9:25 IST
Last Updated 20 ಜೂನ್ 2013, 9:25 IST

ಮುದ್ದೇಬಿಹಾಳ: ಪಟ್ಟಣದಿಂದ ಹಿರೇಮುರಾಳಗೆ ಹೋಗುತ್ತಿದ್ದ ಟಂಟಂ ವಾಹನ ಸರೂರ ಕ್ರಾಸ್ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಹಾಗೂ ಐವರು ಪ್ರಯಾಣಿಕರಿಗೆ ತೀವ್ರ ಗಾಯಗಳಾದ ಘಟನೆ ಬುಧವಾರ ಸಂಭವಿಸಿದೆ.

ವಾಹನದ ಚಾಲಕ ಹಿರೇಮುರಾಳ ಗ್ರಾಮದ ಪ್ರಕಾಶ ಮೇಟಿ ತೀವ್ರವಾಗಿ ಗಾಯಗೊಂಡಿದ್ದು, ಬಾಗಲಕೋಟೆ ಆಸ್ಪತ್ರೆಗೆ ಸೇರಿಸಲಾಗಿದೆ.

ಉಳಿದಂತೆ ಭೀಮಪ್ಪ ವಡ್ಡರ, ಪವಾಡೆಪ್ಪ ವಾಲೀಕಾರ, ಮುದ್ದೇಬಿಹಾಳದ ಯಮನವ್ವ ಮಾದರ ಗಾಯಗೊಂಡಿದ್ದಾರೆ. ವೈದ್ಯಾಧಿಕಾರಿ ಡಾ.ಓಂಕಾರ ಮತ್ತು ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರು. ಘಟನಾ ಸ್ಥಳಕ್ಕೆ ಪಿಎಸ್‌ಐ ಅಂಬಿಗೇರ ಭೇಟಿ ನೀಡಿದ್ದರು. ಮುದ್ದೇಬಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.