ADVERTISEMENT

ತಾಳಿಕೋಟೆ: ಇಂದು ವಚನ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 8:45 IST
Last Updated 26 ಫೆಬ್ರುವರಿ 2012, 8:45 IST

ತಾಳಿಕೋಟೆ: ಶ್ರಿ ಗುರುಬಸವ ಜಯಂತಿಯ ಶತಮಾನೋತ್ಸವ ನಿಮಿತ್ತ ತಾಲ್ಲೂಕು  ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸ್ಥಳೀಯ ಬಸವ ಸಮಿತಿ ಇವರ ಸಹಯೋಗದಲ್ಲಿ ಇದೇ 26ರಂದು ಬೆಳಿಗ್ಗೆ 9.30ಕ್ಕೆ ಬಸವ ಸಮಿತಿಯಲ್ಲಿ ವಚನ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ವಚನ ಸಾಹಿತ್ಯ ಸಮ್ಮೇಳನವನ್ನು ಬಸವ ಸಮಿತಿ ರಾಷ್ಟ್ರ ಘಟಕದ ಅಧ್ಯಕ್ಷ ಬೆಂಗಳೂರಿನ ಅರವಿಂದ ಜತ್ತಿ ಉದ್ಘಾಟಿಸುವರು. ಸಾನ್ನಿಧ್ಯವನ್ನು ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ವಹಿಸುವರು.
 
ಮುಖ್ಯ ಅತಿಥಿಗಳಾಗಿ ಕಸಾಪ ತಾಲ್ಲೂಕು ಘಟಕದ  ಅಧ್ಯಕ್ಷೆ ಶಾಂತಾಬಾಯಿ ನೂಲೀಕರ, ಹಿರಿಯ ವಕೀಲ ಎಂ.ಬಿ. ನಾವದಗಿ, ಬ.ಬಾಗೇವಾಡಿ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ವೀ.ವಿ. ಸಂಘದ ಅಧ್ಯಕ್ಷ ಐ.ಆರ್. ಜಾಲವಾದಿ, ಮಾಜಿ ಅಧ್ಯಕ್ಷ ಎಸ್.ಪಿ. ಸರಶೆಟ್ಟಿ, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ (ಯಾಳಗಿ), ಶ್ರಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಜಿ.ಎಸ್. ಕಶೆಟ್ಟಿ, ಪುರಸಭಾ ಸದಸ್ಯ ಪ್ರಭುಗೌಡ ಮದರಕಲ್ಲ, ಸಹಕಾರಿ ಬ್ಯಾಂಕ್ ನಿರ್ದೇಶಕ ಕಾಶಿನಾಥ ಸಜ್ಜನ (ಬಿದರಕುಂದಿ) ಆಗಮಿಸಲಿದ್ದಾರೆ

ಗೋಷ್ಠಿ-1: ಬೆಳಿಗ್ಗೆ 11.30ಕ್ಕೆ ಜರುಗಲಿದ್ದು ಅಧ್ಯಕ್ಷತೆಯನ್ನು ವಿಜಾಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ವಾಲಿ, ಗುಲ್ಬರ್ಗಾ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಶರಣ ಸಂಜಯ ಮಾಕಲ್ `ವಚನಗಳಲ್ಲಿ ಅಧ್ಯಾತ್ಮ~ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಗುಲಬರ್ಗಾ ಎಂ.ಎಸ್.ಐ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಮೀನಾಕ್ಷಿ ಬಾಳಿ ಇವರು `ವಚನ ಸಾಹಿತ್ಯದ ಪ್ರಸ್ತುತತೆ~ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಗೋಷ್ಠಿ-2: ಮ.2.30ಕ್ಕೆ   ಸಾನಿಧ್ಯವನ್ನು ಆಲಮೇಲ ವಿರಕ್ತಮಠದ ಜಗದೇವಮಲ್ಲಿಬೊಮ್ಮ ಸ್ವಾಮೀಜಿ ವಹಿಸುವರು.

ಅಧ್ಯಕ್ಷತೆಯನ್ನು ಸಾಹಿತಿ ಬಿ.ಎಂ.ಹಿರೇಮಠ ವಹಿಸಿದರೆ, ಉಪನ್ಯಾಸಕರಾಗಿ ಆಗಮಿಸಲಿರುವ ಗುಲಬರ್ಗಾ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಶಿವಗಂಗಾ ರೂಮಾ ಅವರು `ವಚನಗಳಲ್ಲಿ ಆಹಾರ ಪದ್ಧತಿ~ ಕುರಿತು ಮಾತನಾಡುವರು.

ಸಮಾರೋಪ:ಸಂಜೆ 4.ಕ್ಕೆ ಜರುಗಲಿರುವ ಸಮಾರೋಪದಲ್ಲಿಸಾನಿಧ್ಯವನ್ನುಜಗದೇವಮಲ್ಲಿಬೊಮ್ಮಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಗಡಿಸೋಮನಾಳ ಹಿರೇಮಠದ ಇಂದುಧರ ಸ್ವಾಮಿಗಳು ವಹಿಸುತ್ತಾರೆ. ನಿರ್ಣಯ ಮಂಡನೆ: ಪುರಸಭಾಸದಸ್ಯ ಕಾಶೀನಾಥ ಮುರಾಳ ಇವರಿಂದ.

 ಅತಿಥಿಗಳಾಗಿ ಜೆ.ಡಿ.ಎಸ್.ತಾಲ್ಲೂಕು ಘಟಕದ ಅಧ್ಯಕ್ಷ ಅಡಿವೆಪ್ಪ ಕಡಿ, ಟಿ.ಎ.ಪಿ.ಸಿ ಎಂ.ಎಸ್.ಅಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಕ್ಷೇತ್ರ ಸಂನ್ಮೂಲ ವ್ಯಕ್ತಿ ರುದ್ರೇಶ ಕಿತ್ತೂರ, ಡಿಸಿಸಿ ಬ್ಯಾಂಕ ವಿಜಾಪುರ ನಿರ್ದೇಶಕ ಸೋಮನಗೌಡ ಪಾಟೀಲ (ಸಾಸನೂರ), ಎಚ್.ಎಸ್.ಪಾಟೀಲ, ಎಸ್.ಎಂ. ಸಜ್ಜನ, ಶಮಶುದ್ದೀನ್ ನಾಲಬಂದ, ಎಚ್.ಆರ್.ಕಲಕೇರಿ, ಬಿ.ಜಿ. ಪಾಟೀಲ (ಮಿಣಜಗಿ), ಸಿದ್ರಾಮಪ್ಪ ಕಟ್ಟಿಮನಿ ಆಗಮಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.