ADVERTISEMENT

ದೆಹಲಿ ಅತ್ಯಾಚಾರ: ಕರಾಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 5:38 IST
Last Updated 17 ಡಿಸೆಂಬರ್ 2013, 5:38 IST

ವಿಜಾಪುರ: ದೆಹಲಿಯಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಮತ್ತು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯವರು ಸೋಮ ವಾರ ಇಲ್ಲಿ ಕರಾಳ ದಿನ ಆಚರಿಸಿದರು.

ಅಶ್ಲೀಲ ಸಿನಿಮಾದ ಪೋಸ್ಟರ್‌ ಗಳನ್ನು ನಗರದ ಗಾಂಧಿ ಚೌಕ್‌ನಲ್ಲಿ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿ ದರು. ಮಹಿಳಾ ಸಾಂಸ್ಕೃತಿಕ ಸಂಘಟ ನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಬಾಳಮ್ಮ, ಮಹಿಳಾ ದೌರ್ಜನ್ಯ ಹೆಚ್ಚಲು ಅಶ್ಲೀಲ ಸಿನಿಮಾ, ಸಾಹಿತ್ಯ ಹಾಗೂ ವೆಬ್‌ಸೈಟ್‌ಗಳೇ ಕಾರಣ. ಜಿಲ್ಲೆಯಲ್ಲಿಯೂ ಆಶ್ಲೀಲ ಸಿನಿಮಾಗಳ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗು ತ್ತಿದ್ದು, ಅದನ್ನು ತಡೆಯುವಲ್ಲಿ ಜಿಲ್ಲಾ ಆಡಳಿತ ವಿಫಲವಾಗಿದೆ ಎಂದು ದೂರಿದರು.

ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಭರತ್‌ಕುಮಾರ, ದೆಹಲಿ ಯುವತಿಯ ಮೇಲೆ ಅತ್ಯಾ ಚಾರ ಮಾಡಿದವರಿಗೆ ಜಿಲ್ಲಾ ನ್ಯಾಯಾ ಲಯ ಗಲ್ಲು ಶಿಕ್ಷೆ ವಿಧಿಸಿದೆ. ಆದರೆ, ಗಲ್ಲು ಶಿಕ್ಷೆ ಜಾರಿ ಪ್ರಕ್ರಿಯೆ ತುಂಬಾ ವಿಳಂಬದಿಂದ ಕೂಡಿದೆ. ಇದು ಬದಲಾಗಬೇಕು ಎಂದರು.

ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ  ಸಿದ್ಧಲಿಂಗ ಬಾಗೇ ವಾಡಿ, ಸರ್ಕಾರದ ಹಾದಿ ತಪ್ಪಿಸುವ ನೀತಿಗೆ ವಿದ್ಯಾರ್ಥಿ-ಯುವಜನ ಬಲಿ ಯಾಗಬಾರದು. ಉನ್ನತ ನೀತಿ, ಸಂಸ್ಕೃತಿ ಮೈಗೂಡಿಸಿಕೊಂಡು, ವ್ಯವ ಸ್ಥೆಯ ಸುಧಾರಣೆಗೆ ಹೋರಾಟ ಮುಂದುವರೆಸಬೇಕು ಎಂದರು.

ಅಂಜುಮನ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ವಿ.ಎ. ಪಾಟೀಲ, ಸರ್ಕಾರ ಅಶ್ಲೀಲತೆ ಪ್ರಸಾರಕ್ಕೆ ಕಡಿ ವಾಣ ಹಾಕಿ, ಸದಭಿರುಚಿಯ ಸಿನಿಮಾ-ಸಾಹಿತ್ಯ ಪ್ರೋತ್ಸಾಹಿಸಿದರೆ ಮಾತ್ರ ಮಹಿಳಾ ದೌರ್ಜನ್ಯವನ್ನು ಕೊನೆಗೊಳಿ ಸಲು ಸಾಧ್ಯ ಎಂದರು.

ಬಾಳು ಜೇವೂರ, ಉಮೇಶ, ಕಾಶೀ ನಾಥ, ಸಂತೋಷ ಸಜ್ಜನ, ಶೋಭಾ, ಗೀತಾ, ಕಾಶಿಬಾಯಿ, ಬಸವರಾಜ ಭಜಂತ್ರಿ, ದಶರಥ, ಶ್ವೇತಾ, ಯಾಸ್ಮಿನ್, ವಿನೋದ ಮುಂತಾ ದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.