ADVERTISEMENT

ನೇಕಾರರಿಗೆ ಸಮುದಾಯ ಭವನ: ಭರವಸೆ

ಬೇನಾಳ- (ಎನ್. ಎಚ್) ಗ್ರಾಮಕ್ಕೆ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 6:29 IST
Last Updated 6 ಫೆಬ್ರುವರಿ 2017, 6:29 IST

ನಿಡಗುಂದಿ: ಬೇನಾಳ ಗ್ರಾಮದ ನೇಕಾ ರರ ಬೇಡಿಕೆಯಂತೆ ಗ್ರಾಮಕ್ಕೆ ಆದಷ್ಟು ಶೀಘ್ರವಾಗಿ ಸಮುದಾಯ ಭವನ ನಿರ್ಮಿ ಸಿಕೊಡುವುದಾಗಿ ವಿಧಾನ ಪರಿಷತ್ ಸದಸ್ಯ, ರಾಜ್ಯ ನೇಕಾರರ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಭರವಸೆ ನೀಡಿದರು.

ಸಮೀಪದ ಬೇನಾಳ- ಎನ್ಎಚ್ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ, ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೇಕಾರ ಬಾಂಧ ವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಈಗಾಗಲೇ ಸುಮಾರು 475 ಸಮುದಾಯ ಭವನ ರಾಜ್ಯದೆಲ್ಲೆಡೆ ತಾವು ನಿರ್ಮಿಸಿದ್ದಾಗಿ ತಮ್ಮ ಅವಧಿ ಪೂರ್ಣಗೊಳ್ಳುವ ವೇಳೆ ಒಂದು ಸಾವಿರ ಸಮುದಾಯ ಭವನಗಳನ್ನು ಶೋಷಿತ ಸಮುದಾಯಗಳಿಗೆ ನಿರ್ಮಿಸಿಕೊಡುವ ಸಂಕಲ್ಪ ಮಾಡಿದ್ದೇನೆ. ಭವಿಷ್ಯದಲ್ಲಿ ನೇಕಾರರ ಕುಲಕಸುಬಾದ ನೇಕಾರಿಕೆ ಮತ್ತಷ್ಟು ಕುಂಠಿತಗೊಳ್ಳುವ ಆತಂಕ ಎದುರಾಗಿದ್ದು ಕುಲ ಬಾಂಧವರು ನೇಕಾ ರಿಕೆಯಲ್ಲಿ ತಂತ್ರಜ್ಞಾನ ಅಳವಡಿಸಿ ಕೊಂಡು ಬದಲಾವಣೆಯತ್ತ ಮುಖ ಮಾಡುವುದು ಅನಿವಾರ್ಯ  ಎಂದರು.

ಜಿಲ್ಲಾ ನೇಕಾರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ವಿವೇಕಾ ನಂದ ಹುಲ್ಯಾಳ, ಬೇನಾಳ- ಎನ್ಎಚ್ ಬನಶಂಕರಿ ದೇವಸ್ಥಾನ ಕಮಿಟಿ ಅಧ್ಯಕ್ಷ ಎನ್.ಎಂ. ಬಸರಕೋಡ, ಕಾರ್ಯದರ್ಶಿ ಎಸ್.ಸಿ. ಕೊಳ್ಳಿ, ಗ್ರಾಮ ಪಂಚಾಯ್ತಿ ಸದಸ್ಯ ದುರೇಶ ತಳಗಡಿ, ಶಂಕ್ರಪ್ಪ ಕೋಳೂರ, ನಾಗಪ್ಪ ಕೋಳೂರ, ಗ್ಯಾನಪ್ಪಗೌಡ ಬಿರಾದಾರ, ಮಹಾಂತೇಶ ಕೊಳ್ಳಿ, ಶ್ರೀಶೈಲ ತಳಗಡಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.