ತಾಳಿಕೋಟೆ: ಭೂಮಿಯ ಬಿಸಿ ಹೆಚ್ಚುತ್ತಿದೆ. ಹಿಮ ಪರ್ವತಗಳು ಕರಗುತ್ತಿವೆ. ಸಮುದ್ರ ಮಟ್ಟ ಏರುತ್ತಿದೆ ಇದು ಪ್ರಕೃತಿ ವಿನಾಶದತ್ತ ಸಾಗುತ್ತಿರುವ ಲಕ್ಷಣಗಳಾಗಿದ್ದು ಸಮತೋಲನ ಕಾಪಾಡಲು ಪರಿಸರ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಬೇಕು ಎಂದು ಮುದ್ದೇಬಿಹಾಳ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ) ಹೇಳಿದರು.
ಅವರು ಸ್ಥಳೀಯ ಆಶ್ರಯ ಬಡಾವಣೆಯಲ್ಲಿ ಭಾನುವಾರ ಐಕ್ಯತಾ ಸೇವಾ ಸಂಘ ಹಮ್ಮಿಕೊಂಡಿದ್ದ `ನನ್ನ ಭೂಮಿ ನನ್ನ ಕರ್ತವ್ಯ~ ಎಂಬ ಪರಿಸರ ಪ್ರೇಮವನ್ನು ಬೆಳೆಸುವ ವಿನೂತನ ಕಾರ್ಯಕ್ರಮವನ್ನು ಸಸಿ ನೆಟ್ಟು ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆ ಬೆಳವಣಿಗೆಯಿಂದ ಮೂಲಸೌಕರ್ಯ ಒದಗಿಸುವ ನೆಪದಲ್ಲಿ ಅರಣ್ಯಗಳು ನಾಶವಾಗುತ್ತಿವೆ. ಪರ್ವತಗಳು ಸಮತಟ್ಟಾಗುತ್ತಿವೆ. ಕಾಡುಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಇಂಥ ಸನ್ನಿವೇಶದಲ್ಲಿ ಪರಿಸರ ರಕ್ಷಣೆ ಇಲ್ಲದೆ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ನುಡಿದರು.
ಪಿಎಸ್‌ಐ ಜಗದೇವಪ್ಪ, ಐಕ್ಯತಾ ಯುವಕ ಸಂಘದ ಅಧ್ಯಕ್ಷ ರವಿ ಕಟ್ಟಿಮನಿ, ಪುರಸಭೆ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ಸದಸ್ಯ ರವಿ ಬಿರಾದಾರ, ಡಾ. ನಜೀರ್ ಕೋಳ್ಯಾಳ, ಅರಣ್ಯಾಧಿಕಾರಿ ಯಾದವಾಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಕ್ಕು ರಂಗರೇಜ, ವಿಠ್ಠಲ ಮೋಹಿತೆ, ಸಂದೀಪ ಚವ್ಹಾಣ, ಸಂಗಮೇಶ ಹಡಗಿನಾಳ, ನಾಗು ಪತ್ತಾರ, ಸಿದ್ದು ಪೀರಾಪುರ, ಮುತ್ತು ಹಂದಿಗನೂರ, ಈಶ್ವರ ಹೂಗಾರ, ದೇವು ಬಡಿಗೇರ ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಕ್ರೀಡಾಪಟು ಸಂಜೀವ ಹಜೇರಿ ಸ್ವಾಗತಿಸಿದರು. ಎಸ್.ಬಿ. ಕೂಡಗಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.