ADVERTISEMENT

ರೈತರಿಂದ ಧರಣಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 8:10 IST
Last Updated 14 ಫೆಬ್ರುವರಿ 2012, 8:10 IST

ಆಲಮಟ್ಟಿ: ಆಲಮಟ್ಟಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಏಪ್ರಿಲ್ ಅಂತ್ಯದವರೆಗೆ ನೀರು ಹರಿಸಬೇಕು ಎಂದು ಗಡುವು ನೀಡಿ ಕಳೆದ ವಾರ ಪ್ರತಿಭಟನೆ ಮಾಡಿದ ರೈತರ ಪ್ರತಿಭಟನೆಗೆ ಸ್ಪಂದಿಸದೇ ಇರುವುದರಿಂದ ಸೋಮವಾರ ಅಧಿಕಾರಿಗಳ ವಿರುದ್ಧ ಧರಣಿ ಸತ್ಯಾಗ್ರಹ ಆರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಈ ಭಾಗದ ರೈತ ಮುಖಂಡರು, ಪ್ರತಿ ವರ್ಷ ಏಪ್ರಿಲ್‌ವರೆಗೆ ನೀರು ಹರಿಸಬೇಕು ವಾರಾ ಬಂದ್ ಮಾಡಿ ಕೊನೆಯ ಹಂತದ ರೈತರಿಗೆ ನೀರು ಸಿಗಬೇಕು. ಒಡೆದ ಕಾಲುವೆಗಳನ್ನು ದುರಸ್ತಿ ಮಾಡಬೇಕು. ನೀರು ಬಳಕೆದಾರರ ಸಂಘ ರಚನೆ ಮಾಡಬೇಕು. ಅಧಿಕಾರಿಗಳು ಖುದ್ದಾಗಿ ಉಪ ಕಾಲುವೆಗಳಿಗೆ ಭೇಟಿ ನೀಡಿ ರೈತರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕು ಎಂದರು.

ಧರಣಿಯಲ್ಲಿ ಈರನಗೌಡ ಪಾಟೀಲ, ಜಿ.ಸಿ. ಮುತ್ತಲದಿನ್ನಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಕುಂಬಾರ, ಸಿದ್ದಪ್ಪ ವಾಲೀಕಾರ, ಪ್ರಕಾಶ ಪಾಟೀಲ, ವಸಂತ ಸಿರೂರ, ಎಂ.ಕೆ. ಮತ್ತಣ್ಣವರ, ಗುಂಡಪ್ಪ ವೈಜಾಪುರ, ಶಿವಪ್ಪ ಜಟ್ಟಗಿ, ಲಕ್ಷ್ಮಣ ಬಡಿಗೇರ, ಬಸಯ್ಯ ಗಣಾಚಾರಿ, ಯಲ್ಲಪ್ಪ ನ್ಯಾಮಗೌಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಆಲಮಟ್ಟಿ ಎಡದಂಡೆ, ಆಲಮಟ್ಟಿ ಬಲದಂಡೆ ಕಾಲುವೆಯ ಮುಳವಾಡ ಏತ ನೀರಾವರಿಗೆ ಒಳಪಡುವ ಹಲವು ರೈತರು ಭಾಗವಹಿಸಿದ್ದರು.

ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯಲ್ಲಿ ಇದೇ 25ರ ವರೆಗೆ ಮಾತ್ರ ನೀರು ಹರಿಸಲು ನಿರ್ಧರಿಸಲಾಗಿದೆ. ಏಪ್ರಿಲ್ ಅಂತ್ಯದ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.