ADVERTISEMENT

‘ಲಿಂಗಾಯತ ಹೋರಾಟಕ್ಕೆ ಕೈಜೋಡಿಸಿ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 5:26 IST
Last Updated 3 ಡಿಸೆಂಬರ್ 2017, 5:26 IST

ಮುದ್ದೇಬಿಹಾಳ: ಲಿಂಗಾಯತ ಧರ್ಮದ ಮಾನ್ಯತೆಗಾಗಿ ವಿಜಯಪುರದಲ್ಲಿ ಡಿ.10 ರಂದು ನಡೆಯಲಿರುವ ಮಹಾ ರ‍್ಯಾಲಿಯಲ್ಲಿ ಲಿಂಗಾಯತ ಧರ್ಮದ ಅಡಿಯಲ್ಲಿ ಬರುವ ಎಲ್ಲ 92 ಉಪಜಾತಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹೇಮರಡ್ಡಿ ಮಲ್ಲಮ್ಮ ಸೇವಾ ಸಂಘದ ಅಧ್ಯಕ್ಷ ಎಸ್.ಜಿ.ಪಾಟೀಲ ಮನವಿ ಮಾಡಿದರು.

ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ದೊರೆಯುವುದರಿಂದ ಅದರಲ್ಲಿ ಬರುವ ಎಲ್ಲ ಉಪ ಪಂಗಡಗಳ ಜನರಿಗೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ. ಹೀಗಾಗಿ ರ್‌್ಯಾಲಿಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದರು.

ನಿವೃತ್ತ ಉಪ ಪ್ರಾಚಾರ್ಯ ಚಂದ್ರಶೇಖರ ಇಟಗಿ ಮಾತನಾಡಿ, ಲಿಂಗಾಯತ ರ‍್ಯಾಲಿಯ ಹೋರಾಟ ಯಾವುದೇ ಪಂಗಡದ ವಿರುದ್ಧವಾಗಿಲ್ಲ. ಬಸವಣ್ಣ ಕಟ್ಟಿ ಬೆಳೆಸಿದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರೆತರೆ ಎಲ್ಲ ಉಪ ಪಂಗಡಗಳ ಮಕ್ಕಳಿಗೆ ಶೈಕ್ಷಣಿಕ, ಸಾಮಾಜಿಕ ಸವಲತ್ತುಗಳು ಲಭಿಸುತ್ತವೆ ಎಂದು ತಿಳಿಸಿದರು.

ADVERTISEMENT

ಚನ್ನಪ್ಪ ಕಂಠಿ, ಎಂ.ಬಿ.ನಾವದಗಿ, ಬಸವರಾಜ ಮೋಟಗಿ, ಕಾಮರಾಜ ಬಿರಾದಾರ, ಅಮರಣ್ಣವರ, ಗೋಪಿ ಮಡಿವಾಳರ, ಮಡಿವಾಳಪ್ಪ ಮಡಿವಾಳರ, ಚನ್ನಬಸಪ್ಪ ಕುಂಬಾರ, ಪ್ಯಾಟಿಗೌಡರ, ಚನಬಸು ಗುಡ್ಡದ, ಕುಂಟೋಜಿ ಹೂಗಾರ, ರಾಜು ಕಲಬುರ್ಗಿ, ರವಿ ತಡಸದ, ಅಶೋಕ ಚಟ್ಟೇರ, ಮುರಿಗೆಪ್ಪ ಮೋಟಗಿ, ಮುರಿಗೆಪ್ಪ ಹಡಲಗೇರಿ, ಮಹಾಂತೇಶ ನಿಡಗುಂದಿ, ಅಮರೇಶ ತೋಟಗಿ, ಈರಣ್ಣ ರಕ್ಕಸಗಿ, ಮಲ್ಲು ಬಿರಾದಾರ, ಸಂಗಮೇಶ ನಾವದಗಿ, ಶಿವು ಹುರಕಡ್ಲಿ, ಭೀಮನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.