ADVERTISEMENT

ವಿಜಾಪುರ ಜಿಲ್ಲೆಯಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:40 IST
Last Updated 2 ಅಕ್ಟೋಬರ್ 2012, 4:40 IST

ವಿಜಾಪುರ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆ ಸುರಿದಿದೆ. ಸಿಂದಗಿ ತಾಲ್ಲೂಕು ತಾವರಖೇಡದಲ್ಲಿ ಸಿಡಿಲು ಬಡಿದು ಸಾಯಬಣ್ಣ ಕಣ್ಣಪ್ಪ ಪೂಜಾರಿ ಎಂಬವರಿಗೆ ಸೇರಿದ ಒಂದು ಎತ್ತು ಮೃತಪಟ್ಟಿದೆ.

ಸಿಂದಗಿ ತಾಲ್ಲೂಕು ಆಲಮೇಲದಲ್ಲಿ ಅತಿ ಹೆಚ್ಚು 97.8 ಮಿ.ಮೀ. ಮಳೆಯಾಗಿದ್ದು, ವಿಜಾಪುರ ನಗರದಲ್ಲಿ 53.6 ಮಿ.ಮೀ. ಮಳೆ ಆಗಿದೆ. ಜಿಲ್ಲೆಯಲ್ಲಿ ಸರಾಸರಿ 40.7 ಮಿ.ಮೀ. ಯಷ್ಟು ಮಳೆ ಆಗಿದೆ.

ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ 33.3 ಮಿ.ಮೀ., ವಿಜಾಪುರ ತಾಲ್ಲೂಕಿನಲ್ಲಿ 51.5 ಮಿ.ಮೀ., ಇಂಡಿ ತಾಲ್ಲೂಕಿನಲ್ಲಿ 27.9 ಮಿ.ಮೀ., ಮುದ್ದೇಬಿಹಾಳ ತಾಲ್ಲೂಕಿ ನಲ್ಲಿ 35.1 ಮಿ.ಮೀ., ಸಿಂದಗಿ ತಾಲ್ಲೂಕಿನಲ್ಲಿ 65.6 ಮಿ.ಮೀ. ಮಳೆಯಾಗಿದೆ.

ಜಿಲ್ಲಾ ಅಂಕಿ-ಅಂಶ ಇಲಾಖೆ ನೀಡಿದ ಮಾಹಿತಿಯಂತೆ ಜಿಲ್ಲೆಯ ವಿವಿಧ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆಯ ವಿವರ (ಮಿಲಿ ಮೀಟರ್‌ಗಳಲ್ಲಿ):

ಬಸವನ ಬಾಗೇವಾಡಿ: 19.3, ಮನಗೂಳಿ: 27, ಆಲಮಟ್ಟಿ: 59.3, ಹೂವಿನ ಹಿಪ್ಪರಗಿ: 25.6, ಆರೇಶಂಕರ: 51.2, ಮಟ್ಟಿಹಾಳ: 17.4.

ವಿಜಾಪುರ ನಗರ: 53.6, ನಾಗಠಾಣ: 52.2, ಭೂತನಾಳ: 68.2, ಹಿಟ್ಟಿನಹಳ್ಳಿ 47, ತಿಕೋಟಾ: 57.4, ಮಮದಾಪೂರ: 25.4, ಕುಮಟಗಿ: 54.2, ಕನ್ನೂರ: 79, ಬಬಲೇಶ್ವರ: 26.2. ಇಂಡಿ: 10, ನಾದ ಬಿ.ಕೆ.: 62.2, ಅಗರಖೇಡ: 62, ಹೊರ್ತಿ: 46.3, ಹಲಸಂಗಿ: 12.6, ಚಡಚಣ: 10.1, ಝಳಕಿ: 12.5. ಮುದ್ದೇಬಿಹಾಳ: 38,ನಾಲತವಾಡ:19.4, ತಾಳಿಕೋಟೆ:38.2,ಢವಳಗಿ: 45. ಸಿಂದಗಿ: 42, ಆಲಮೇಲ: 97.8, ಸಾಸಾಬಾಳ: 35, ರಾಮನಳ್ಳಿ: 86.4, ಕಡ್ಲೇವಾಡ: 30.2, ದೇವರ ಹಿಪ್ಪರಗಿ: 74, ಕೊಂಡಗೂಳಿ: 24 ಮಿ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.