ADVERTISEMENT

ಶೈಕ್ಷಣಿಕ, ಆಧ್ಯಾತ್ಮಿಕ ಬೇಸಿಗೆ ಶಿಬಿರ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 6:29 IST
Last Updated 24 ಏಪ್ರಿಲ್ 2013, 6:29 IST

ವಿಜಾಪುರ: ತಾಲ್ಲೂಕಿನ ಕನ್ನೂರಿನ ಶಾಂತಿ ಕಟೀರದಲ್ಲಿ ಇಲ್ಲಿನ ಸದ್ಗುರು ಗಣಪತರಾವ ಮಹಾರಾಜರ ಶಾಂತಿ ಕುಟೀರ ಟ್ರಟ್ಸ್ ಹಾಗೂ ಭಾರತೀಯ ಸುರಾಜ್ಯ ಸಂಸ್ಥೆಯ ಸಹಯೋಗದಲ್ಲಿ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರ ಯಶಸ್ವಿಯಾಗಿ ನಡೆಯುತ್ತಿದೆ.

ಕಳೆದ ಏ.1ರಿಂದ ಆರಂಭವಾದ ಈ ಮಕ್ಕಳ ಶಿಬಿರ ಬಹು ಆಯಾಮ ಗಳೊಂದಿಗೆ ವಿದ್ಯಾರ್ಥಿಗಳ ಜ್ಞಾನ ದಾಹವನ್ನು ತಣಿಸುತ್ತಿದೆ. ಸಮರ್ಥ ಸದ್ಗುರು ಗಣಪತರಾವ ಮಹಾರಾಜರ ಆಶಯದಂತೆ ಮಕ್ಕಳಿಗೆ ಅಕ್ಷರಾಭ್ಯಾಸದ ಜೊತೆಗೆ ಆಧ್ಯಾತ್ಮಿಕ ಶಿಕ್ಷಣ ನೀಡಲಾಗುತ್ತಿದೆ. ನಿತ್ಯ ಬೆಳಿಗ್ಗೆ 9ಕ್ಕೆ ಆಶ್ರಮದ ಆವರಣದಲ್ಲಿ ನಡೆಯುವ ತಿಡಗುಂದಿ, ಮಖಣಾಪೂರ, ಮಖಣಾಪೂರ ತಾಂಡಾ, ಶಿರನಾಳ, ಬೊಮ್ಮನಹಳ್ಳಿ, ಡೊಮನಾಳ, ಡೊಮನಾಳ ತಾಂಡಾ, ದೊಡ್ಡಿ, ಅಗಸನಾಳ, ಕೊಟ್ನಾಳ, ಬಸನಾಳದಿಂದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

6 ನೇ ತರಗತಿಯಿಂದ 10ನೇ ತರಗತಿಯ ಸುಮಾರು 400 ವಿದ್ಯಾರ್ಥಿ ಗಳು ಪ್ರತಿ ನಿತ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಬಾಗಲ ಕೋಟೆಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೀರಣ್ಣಾ ಚರಂತಿಮಠ ವಿದ್ಯಾರ್ಥಿಗಳಿಗಾಗಿ ಉಚಿತ ಬಸ್ ವ್ಯವಸ್ಥೆ ಒದಗಿಸಿದ್ದಾರೆ.

ಸಾಮೂಹಿಕ ಪ್ರಾರ್ಥನೆ, ಶ್ಲೋಕ, ಸರ್ವಧರ್ಮ ಪ್ರಾರ್ಥನೆ, ಧ್ಯಾನ, ಧ್ಯಾನದ ಮಹತ್ವ, ಆದರ್ಶ ವಿದ್ಯಾರ್ಥಿ-ಶಿಕ್ಷಕರ ಗುಣ ವಿಶೇಷಣ ಗಳ ಶಿಕ್ಷಣ ನೀಡಲಾಗುತ್ತಿದೆ.

ಗಣೀತ, ವಿಜ್ಞಾನ, ಇಂಗ್ಲೀಷ,ಇತಿಹಾಸ, ಕನ್ನಡ ವ್ಯಾಕರಣ ಸ್ಥೂಲವಾಗಿ ಪರಿಣಿತ ಶಿಕ್ಷಕರಿಂದ ಬೋಧನೆ ನೀಡಲಾಗುತ್ತಿದೆ. ಸಂಪ ನ್ಮೂಲ ವ್ಯಕ್ತಿಗಳಾಗಿ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ: ದಿಲಷಾದ್, ಡಾ. ಸುನಂದಮ್ಮ, ಇತಿಹಾಸ ತಜ್ಞ ಡಾ: ಆನಂದ ಕುಲಕರ್ಣಿ, ಧಾರವಾಡದ ಎ.ಸಿ ಪಾವಟೆ, ಬೆಂಗಳೂರಿನ ವಾಗ್ದೆವಿ ವಿಲಾಸ ಸಂಸ್ಥೆಯ ಶಿಕ್ಷಕ ಜಯಪ್ರಕಾಶ, ವಿನಯಭಟ್, ಹರೀಶ ಭಟ್, ಪರಮೇಶ್ವರ ಭಟ್, ಇದಲ್ಲದೆ ಸಂಡೂರು, ಸಿಂದಗಿ, ಕನ್ನೂರಿನ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಿ ಶಿಬಿರದ ಯಶಸ್ಸಿಗೆ ಶ್ರಮಿಸಿದರು.

ವಿಶೇಷ ಶಿಬಿರ
ವಿಜಾಪುರ ನಗರದ ಬಿಡಿಪಿಎಚ್‌ಡಬ್ಯೂ ಸಂಸ್ಥೆಯ ಖಾಸಗಿ ಕೈಗಾರಿಕಾ ಸಂಸ್ಥೆ ಹಾಗೂ ಬೆಂಗಳೂರಿನ ಉದ್ಯೋಗ ತರಬೇತಿ ನಿರ್ದೇಶನಾಲಯದ ಆಶ್ರಯದಲ್ಲಿ ಎನ್‌ಎಸ್‌ಎಸ್‌ನ 13ನೇ ವಾರ್ಷಿಕ ವಿಶೇಷ ಶಿಬಿರವನ್ನು ಈಚೆಗೆ ಆಯೋಜಿಸಲಾಗಿತ್ತು.

ಶ್ರೀಶಾಂತ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಾನಿಧ್ಯವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕ ಎಸ್.ಎಂ. ಕಾಳಗಿ, ವಿ.ಎನ್. ಪಾಟೀಲ, ಡಿ.ಎಸ್. ಪಟ್ಟಣಶೆಟ್ಟಿ, ಎ.ಟಿ. ಹಾವರಗಿ, ಡಿ.ಎನ್. ಕೋಳಿ, ಎ.ಎನ್. ಕರೋನಿ, ಡಿ.ಬಿ. ಕೊಟ್ನಾಳ ಮುಂತಾದವರು ಭಾಗವಹಿಸಿದ್ದರು.

ಮಹಿಳಾ ದಿನಾಚರಣೆ
ವಿಜಾಪುರ ನಗರದ ಪಾರ್ವತಿ ಮಹಿಳಾ ಸಂಸ್ಥೆಯ ವತಿಯಿಂದ ಈಚೆಗೆ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕಿ ವಸಂತ ಪ್ರೇಮಾ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಡಾ. ಸುನಿತಾ ಚವ್ಹಾಣ, ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಸಪರೆ ಶ್ರೀನಿವಾಸ ಬಿ.ಆರ್, ಬಿಡಿಸಿಸಿ ಬ್ಯಾಂಕ್‌ನ ಅಧಿಕಾರಿ ಶಿವಾಳಕರ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.