ADVERTISEMENT

ಹೊಲಕ್ಕೆ ನುಗ್ಗುತ್ತಿರುವ ಕಾಲುವೆ ನೀರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:09 IST
Last Updated 3 ಸೆಪ್ಟೆಂಬರ್ 2013, 6:09 IST

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜ ನೆಯ ಮುಳವಾಡ ಪೂರ್ವ ಕಾಲು ವೆಯ ಡಿ6 ಲ್ಯಾಟರಲ್ ನಂ.3 ಉಪ ಕಾಲುವೆಗೆ ಟೇಲ್ ಎಂಡ್ (ಕಾಲುವೆಯ ತುತ್ತ ತುದಿ) ಇಲ್ಲದ ಕಾರಣ ಬೇನಾಳ ಆರ್.ಎಸ್. ಪುನರ್ವಸತಿ ಕೇಂದ್ರದ ಇಪ್ಪತ್ತೈದಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರು ನುಗ್ಗಿ ಕಳೆದ ಒಂದು ತಿಂಗಳಿಂದ ಹಾನಿ ಸಂಭವಿಸಿದೆ.

ಈ ಬಾಧಿತ ಜಮೀನುಗಳಲ್ಲಿ ನೀರು ರಭಸವಾಗಿ ಕಳೆದ ಒಂದು ತಿಂಗಳಿಂದ ಹರಿಯುತ್ತಿದ್ದು, ಪ್ರತಿ ವರ್ಷವೂ ಕಾಲುವೆಗೆ ನೀರು ಬಿಟ್ಟಾಗ, ಕಾಲುವೆಯ ಕೆಳಭಾಗದ ಈ ರೈತರ ಗೋಳು ಇದ್ದದ್ದೆ.

ಚಿಮ್ಮಲಗಿ ಪುನರ್ವಸತಿ ಕೇಂದ್ರ ಭಾಗ-2 ರ ಬಳಿ ಇರುವ ಮುಳುವಾಡ ಏತ ನೀರಾವರಿಯ ಉಪಕಾಲುವೆ ಸಂಖ್ಯೆ 3ರಲ್ಲಿಯೂ ಇದೇ ಸಮಸ್ಯೆ ಮೇಲಿಂದ ಮೇಲೆ ಕಾಣಿಸುತ್ತದೆ. 50ಕ್ಕೂ ಅಧಿಕ ಎಕರೆ ಜಮೀನಿಗೆ ನೀರು ನುಗ್ಗುವ ಘಟನೆ ಸಾಮಾನ್ಯವಾಗಿದೆ.
ಬೇನಾಳ ಆರ್.ಎಸ್. ಗ್ರಾಮದ ರಾಜೇಸಾಬ ಬಿಳೇಕುದರಿ, ಖಾದರ ಬಾಷಾ ಬಿಳೆಕುದರಿ, ಅಲ್ಲಿಸಾಬ್ ಬೆಣ್ಣಿ, ಯಮನಪ್ಪ ವಾಲಿಕಾರ, ದಸ್ತಗೀರ ಸಾಬ್ ಬಿಳೇಕುದರಿ, ಬಾವಾಸಾಬ್ ಸಾಲಿಮನಿ ಸೇರಿದಂತೆ ಹಲವರ ಸುಮಾರು 50 ಎಕರೆ ಭೂಮಿ ಜಲಾವೃತಗೊಂಡಿದೆ.

ಭೂಮಿಯಲ್ಲಿ ಕಳೆದ ಒಂದು ತಿಂಗಳಿಂದ ನೀರು ನಿಂತು ಅಂದಾಜು ಒಂದು ಲಕ್ಷ ರೂ ಕ್ಕಿಂತಲೂ ಅಧಿಕ ಮೌಲ್ಯದ ಸೂರ್ಯಕಾಂತಿ, ತೊಗರಿ, ಮೆಕ್ಕೆ ಜೋಳದ ಬೀಜಗಳು ಜಲಾವೃತಗೊಂ ಡಿವೆ. ಅಲ್ಲದೇ ಪ್ರತಿ ವರ್ಷವೂ  ಈ ರೀತಿ ನೀರು ಬರುವುದರಿಂದ  ಭೂಮಿ ಸವುಳು-ಜವಳಿಗೆ ತುತ್ತಾಗುತ್ತದೆ  ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಈ ಕುರಿತು ಸಂಬಂಧಿಸಿದ ಅಧಿಕಾರಿ ಗಳನ್ನು ಪ್ರಶ್ನಿಸಿದರೇ, ಮುಳವಾಡ ಏತ ನೀರಾವರಿ ಯೋಜನೆ ಪೂರ್ವ ಕಾಲುವೆ ಯಡಿ ಈ ರೀತಿ ಎರಡು ಕಡೆ ಸಮಸ್ಯೆ ಯಿದ್ದು, ಅವುಗಳ ಟೇಲ್ ಎಂಡ್ ರಚ ನೆಗೆ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಂದ ಮಂಜೂ ರಾದ ತಕ್ಷಣ ಕಾರ್ಯ ಪ್ರಾರಂಭಿಸು ತ್ತೇವೆ, ಟೇಲ್ ಎಂಡ್ ಹಾಯಲು ರೈತರ ಒಪ್ಪಿಗೆ ಪತ್ರ ಅವಶ್ಯಕತೆ ಇದೆ ಎಂದರು.

ಆಗ್ರಹ: ಕೂಡಲೇ ಮುಳವಾಡ ಪೂರ್ವ ಕಾಲುವೆಯ ಡಿ.6 ಲ್ಯಾಟರಲ್ ನಂ. 3ಕ್ಕೆ ಟೇಲ್ ಎಂಡ್ ಕಾಮಗಾರಿ ಯನ್ನು ಕೂಡಲೇ ಮುಗಿಸಬೇಕು, ಹಾನಿಯಾದ ಬೆಳೆಗೆ ಪರಿಹಾರ ನೀಡಬೇಕು. ಇಲ್ಲದಿದ್ದರೇ ಆಲಮಟ್ಟಿ ಮುಖ್ಯ ಎಂಜಿನಿಯರ್ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಬೇನಾಳ ಪುನರ್ವಸತಿ ಕೇಂದ್ರದ ಮುಖಂಡರಾದ ರವಿ ಬಿರಾದಾರ, ಗ್ರಾ.ಪಂ ಸದಸ್ಯ ರಾಜೇಸಾಬ ಬಾಗೇವಾಡಿ, ಹನುಮಂತ ತಳವಾರ, ಅಶೋಕ ಪೂಜಾರಿ, ರವಿ ರಾಠೋಡ ಮೊದಲಾದವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.