ADVERTISEMENT

‘ಒಂದೇ ಸಿಇಟಿ ಇರಲಿ; ಹೊಸ ನೀತಿ ಬೇಡ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 4:59 IST
Last Updated 21 ಡಿಸೆಂಬರ್ 2013, 4:59 IST

ವಿಜಾಪುರ: ವೃತ್ತಿ ಶಿಕ್ಷಣ ಪ್ರವೇಶಕ್ಕೆ ಸರ್ಕಾರ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಬೇಕು. ಈಗಿ ರುವ ಶುಲ್ಕ ನೀತಿಯನ್ನೇ ಮುಂದುವರೆ ಸಬೇಕು ಮತ್ತು 2006 ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿಯ ಸಿದ್ಧೇಶ್ವರ ದೇವಸ್ಥಾನ ದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ, ಹೆಚ್ಚುವರಿ ಜಿಲ್ಲಾ ಧಿಕಾರಿ ಗಂಗೂಬಾಯಿ ಮಾನಕರ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರದ ಈ ತೀರ್ಮಾನ, ವೃತ್ತಿ ಶಿಕ್ಷಣ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಭರಿಸಲು ಸಾಧ್ಯವೇ ಇಲ್ಲವಾಗುತ್ತದೆ. 2006ರ ವೃತ್ತಿ ಶಿಕ್ಷಣ ಪ್ರವೇಶ ಕಾಯ್ದೆ ಯನ್ನು ಜಾರಿಗೆ ತರಬಾರದು ಎಂದು ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶರತ್‌ ಬಿರಾದಾರ ಆಗ್ರಹಿಸಿದರು.

ಖಾಸಗಿ ಕಾಲೇಜುಗಳಲ್ಲಿ ಈ ವರೆಗೆ 38,000 ಸೀಟುಗಳು ದೊರೆಯು ತ್ತಿದ್ದವು. ಇನ್ನು ಮುಂದೆ ಯಾವ ಖಾಸಗಿ ಕಾಲೇಜಿನಲ್ಲಿಯೂ ಸರ್ಕಾರಿ ಕೋಟಾದಡಿ ಸೀಟು ದೊರೆಯುವು ದಿಲ್ಲ. ವೈದ್ಯಕೀಯ, ದಂತ ವೈದ್ಯಕೀಯ ಶಿಕ್ಷಣವಂತೂ ಬಡ, ಮಧ್ಯಮ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಕನಸಿನ ಮಾತಾಗುತ್ತದೆ ಎಂದರು.

ಸಂಘಟನೆಯ ನಗರ ಘಟಕದ ಕಾರ್ಯದರ್ಶಿ ಸಂತೋಷ ಬಿರಾದಾರ, ಹೊಸ ಕಾಯ್ದೆಯಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ಲಭ್ಯತೆಯ ಪ್ರಮಾಣ ಕಡಿಮೆಯಾಗಿದೆ. ಖಾಸಗಿ ಆಡಳಿತ ಮಂಡಳಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಸರ್ಕಾರ ಈ ನೀತಿಗೆ ಮುಂದಾಗಿದೆ ಎಂದು ದೂರಿದರು.

ಭಾಗ್ಯಾ ಮೂಲಿಮನಿ, ಈ ಕಾಯ್ದೆ ಜಾರಿಯಾದರೆ ಕೆಲವೇ ಕೆಲವು ಸೀಟು ದೊರೆಯಲಿವೆ ಎಂದರು.
ಕಾಮೆಡ್‌–ಕೆ ಒಕ್ಕೂಟ ಸಾಕಷ್ಟು ಅವಾಂತರ ಮಾಡಿದೆ.  ಪ್ರವೇಶ ಮೇಲುಸ್ತುವಾರಿ ಮತ್ತು ಶುಲ್ಕ ಮೇಲು ಸ್ತುವಾರಿ ಸಮಿತಿಗಳು ಈ ಕುರಿತು ನೀಡಿ ರುವ ದೂರುಗಳ ಬಗೆಗೆ ಯಾವುದೇ ಸರ್ಕಾರ ಈ ವರೆಗೆ ಕ್ರಮಕೈಗೊಂಡಿಲ್ಲ. ಈ ದೂರುಗಳನ್ನು ಬಹಿರಂಗ ಪಡಿಸ ಬೇಕು ಎಂದು ಮುಖಂಡರು ಆಗ್ರಹಿಸಿ ದರು. ದೇವೇಂದ್ರ ರಾಠೋಡ, ಆನಂದ ಚವ್ಹಾಣ, ಸಂತೋಷ ಲಮಾನಿ, ಅರುಣ ಸಿಂಗೆ, ಜೈಸಿಂಹ ರಾಠೋಡ, ವಿದ್ಯಾ, ಸಂತೋಷ ರಾಠೋಡ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.