ADVERTISEMENT

‘ಕಲಿಕೋತ್ಸವದಿಂದ ಗುಣಮಟ್ಟ ಹೆಚ್ಚಳ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 7:13 IST
Last Updated 23 ಡಿಸೆಂಬರ್ 2013, 7:13 IST
ತಾಳಿಕೋಟೆ ಸಮೀಪದ ಕೊಡಗಾನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಕಲಿಕೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ಸ್ಥಳೀಯ ಶಾಲೆಯ ವಿದ್ಯಾರ್ಥಿಗಳು ಏಕಲವ್ಯ ನಾಟಕವನ್ನು ಪ್ರದರ್ಶನ ಮಾಡಿದರು.
ತಾಳಿಕೋಟೆ ಸಮೀಪದ ಕೊಡಗಾನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಕಲಿಕೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ಸ್ಥಳೀಯ ಶಾಲೆಯ ವಿದ್ಯಾರ್ಥಿಗಳು ಏಕಲವ್ಯ ನಾಟಕವನ್ನು ಪ್ರದರ್ಶನ ಮಾಡಿದರು.   

ತಾಳಿಕೋಟೆ: ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಅಳೆ ಯುವ ಮಾನವಾಗಿರುವ ಕಲಿಕೋತ್ಸವ ದಿಂದ  ಇಲ್ಲಿ ಸ್ಪರ್ಧೆ ಏರ್ಪಡುವುದರಿಂದ ಸರ್ಕಾರಿ ಶಾಲೆಗಳ ಗುಣಮಟ್ಟದ ಹೆಚ್ಚಳವಾಗುತ್ತದೆ ಎಂದು ಕೊಡಗಾ ನೂರ ತಾ.ಪಂ ಸದಸ್ಯ ಸಾಹೇಬಗೌಡ ಬಿರಾದಾರ ಹೇಳಿದರು.

ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ  ಭೀಮನಗೌಡ ವಣಿಕ್ಯಾಳ ವಹಿಸಿದ್ದರು. ಎಸ್‌ಡಿಎಂಸಿ ಸದಸ್ಯ ಹಣಮಂತ ತಳವಾರ,    ಬಸನಗೌಡ ಪಾಟೀಲ,  ಮುಖ್ಯ ಶಿಕ್ಷಕಿ ಐ.ಟಿ.ಥಬ್ಬಣ್ಣವರ, ಎಂ.ಎಸ್‌. ಹುಲ್ಲೂರ, ಗುರುಬಾಯಿ ಮನೂರ, ರುದ್ರೇಶ ಮುರಾಳ,  ಎಂ.ವಿ. ಕೋರ ವಾರ, ಎಸ್‌.ಎಂ.ಢಕಣಿ, ಪ್ರೌಢ ಶಾಲೆ ಎಂ.ಜಿ.ದೇಶಪಾಂಡೆ, ಎಸ್‌. ಎನ್‌. ಕಾಂಬಳೆ, ಈರಣ್ಣ ಬೆಣ್ಣೂರ,  ಪ್ರಾಸ್ತಾವಿಕವಾಗಿ ಸಿ.ಆರ್‌.ಪಿ. ಪಿ.ಎ.ಮುಲ್ಲಾ ಮಾತನಾಡಿದರು.

ದೇಣಿಗೆ ನೀಡಿಕೆ: ಸ್ಥಳೀಯ ಶಾಲಾ ಅಭಿವೃದ್ಧಿಗಾಗಿ ಎಸ್‌ಡಿಎಂಸಿ ಸದಸ್ಯ ಹಣಮಂತ ಕೊಡಗಾನೂರ ₨10 ಸಾವಿರ, ಆನಂದಗೌಡ (ಬಾಬು) ಪಾಟೀಲ ಒಂದು ಸಾವಿರ ರೂ.,  ಶಾಂತಗೌಡ ಹೆಮ್ಮಡಗಿ ಹಾಗೂ ಶಿವನಗೌಡ ಅಮಲ್ಯಾಳ ಸೇರಿ 100 ನೋಟ್‌ ಪುಸ್ತಕ ಹಾಗೂ ನೂರು ಪೆನ್‌,  ತಾ.ಪಂ. ಸದಸ್ಯ ಸಾಹೇಬಗೌಡ ಬಿರಾ ದಾರ ₨5 ಸಾವಿರ ಮೌಲ್ಯದ ಆರು ಕುರ್ಚಿ, ಎಸ್‌ಡಿಎಂಸಿ ಅಧ್ಯಕ್ಷರಿಂದ ಧ್ವಜಾರೋಹಣ ವೇದಿಕೆ ನಿರ್ಮಾಣಕ್ಕೆ  ದೇಣಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.