ADVERTISEMENT

ಇಂಡಿ: ಭೀಮಾ ನದಿಗೆ 1.40 ಲಕ್ಷ ಕ್ಯುಸೆಕ್ ನೀರು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 15:43 IST
Last Updated 28 ಆಗಸ್ಟ್ 2024, 15:43 IST
ಇಂಡಿ ಉಪ ವಿಭಾಗಾಧಿಕಾರಿ ಗದ್ಯಾಳ ಅವರು ಬುಧವಾರ ಸಿಬ್ಬಂದಿ ಜೊತೆಗೂಡಿ ಭೀಮಾ ನದಿಯ ದಂಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು 
ಇಂಡಿ ಉಪ ವಿಭಾಗಾಧಿಕಾರಿ ಗದ್ಯಾಳ ಅವರು ಬುಧವಾರ ಸಿಬ್ಬಂದಿ ಜೊತೆಗೂಡಿ ಭೀಮಾ ನದಿಯ ದಂಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು    

ಇಂಡಿ: ಇಂಡಿ, ಚಡಚಣ, ಆಲಮೇಲ, ಸಿಂದಗಿ ತಾಲ್ಲೂಕುಗಳಲ್ಲಿ ಹರಿಯುವ ಭೀಮಾ ನದಿಗೆ ಬುಧವಾರ ಸಂಜೆ 4 ಗಂಟೆಗೆ 1.40 ಲಕ್ಷ  ಕ್ಯುಸೆಕ್ ನೀರು ಹರಿಯ ಬಿಡಲಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ 90 ಸಾವಿರ ಮತ್ತು ವೀರಭಟಕರ ಜಲಾಶಯದಿಂದ ಭೀಮಾ ನದಿಗೆ 50 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದೆ ಎಂದರು.

ಇದೇ ವೇಳೆ ಇಂದೆ ವೀರಭಟಕರ ಜಲಾಶಯದಿಂದ ಇನ್ನು ಸ್ವಲ್ಪ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ ಎಂದಿದ್ದಾರೆ.

ADVERTISEMENT

ಈಗಾಗಲೇ ಇಂದು ಇಂಡಿ ತಾಲ್ಲೂಕಿನ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಎಲ್ಲ ಬ್ಯಾರೇಜುಗಳಿಗೆ ಭೇಟಿ ನೀಡಿದ್ದು, ಎಲ್ಲ ಕರ್ನಾಟಕದ ನಾಲ್ಕು ಮತ್ತು ಮಹಾರಾಷ್ಟ್ರದ ನಾಲ್ಕು ಬ್ಯಾರೇಜುಗಳ ಮೇಲಿಂದ ನೀರು ಹೋಗುತ್ತಿದ್ದು, ರೈತರು ಕರ್ನಾಟಕ ಕಡೆಯಿಂದ ಬ್ಯಾರೇಜ್‌ ಮೇಲಿಂದ ಹೋಗುವ ಅಥವಾ ವಾಹನ ತೊಳೆಯುವ ಅಥವಾ ಯಾವುದೇ ರೀತಿಯ ಚಟುವಟಿಕೆ ಮಾಡದಂತೆ ಎಚ್ಚರಿಕೆ ವಹಿಸಬೇಕೆಂದು ಗದ್ಯಾಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.