ADVERTISEMENT

‘ಧರ್ಮ ಅರಿಯದವರಿಂದ ವಿಷಬೀಜ ಬಿತ್ತುವ ಕೆಲಸ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 7:09 IST
Last Updated 19 ಜನವರಿ 2018, 7:09 IST
ಮುದ್ದೇಬಿಹಾಳದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ಬುಧವಾರ ನಡೆದ ಸರ್ವ ಧರ್ಮ ಸಮ್ಮೇಳನವನ್ನು ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ ಉದ್ಘಾಟಿಸಿದರು
ಮುದ್ದೇಬಿಹಾಳದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ಬುಧವಾರ ನಡೆದ ಸರ್ವ ಧರ್ಮ ಸಮ್ಮೇಳನವನ್ನು ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ ಉದ್ಘಾಟಿಸಿದರು   

ಮುದ್ದೇಬಿಹಾಳ: ಜಗತ್ತಿನ ಪ್ರತಿಯೊಂದು ಧರ್ಮವೂ ಶಾಂತಿ, ಸಹಬಾಳ್ವೆ, ಸಹೋದರತ್ವವನ್ನೇ ಹೇಳುತ್ತವೆ, ಆದರೆ, ಧರ್ಮವನ್ನು ಅರಿಯದ ಕೆಲವರು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ತಾಲ್ಲೂಕು ಘಟಕದ ಅಧ್ಯಕ್ಷ ಯು.ಎನ್.ಕುಂಟೋಜಿ ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ಬುಧವಾರ ಸಿಸ್ಟರ್ ಆಫ್ ಚಾರಿಟಿ, ಸೇವಾ ಸದನ ಸಮಾಜ ಅಭಿವೃದ್ಧಿ ಕೇಂದ್ರದ ವತಿಯಿಂದ ಕ್ರಿಸ್ತ ಜಯಂತಿ ಮತ್ತು ಹೊಸ ವರ್ಷ ನಿಮಿತ್ತ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಗವದ್ಗೀತೆ, ಕುರಾನ್, ಬೈಬಲ್ ಸೇರಿದಂತೆ ಯಾವ ಧರ್ಮ ಗ್ರಂಥಗಳೂ ಜಗಳಾಡುವುದನ್ನು ಹೇಳಿಲ್ಲ ಎಂದರು.

‘ಭಾರತ ಭಾವೈಕ್ಯದ ನೆಲೆಬೀಡು. ಆದರೆ, ದೇಶದಲ್ಲಿ ಈಚೆಗೆ ಅಸಹನೆ ತಾಂಡವಾಡುತ್ತಿದೆ. ಜಾತಿ, ಧರ್ಮಗಳ ಹೆಸರಿನಲ್ಲಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ತಪ್ಪು ಕೆಲಸ ನಡೆದಿದೆ. ಮೊದಲು ಅದನ್ನು ನಿಲ್ಲಿಸುವ ಕೆಲಸವಾಗಬೇಕು. ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳ ಮೇಲೆ ಜೀವನ ನಡೆಸಿದರೆ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ’ ಎಂದು ಹೇಳಿದರು.

ADVERTISEMENT

ತಂಗಡಗಿ ಹಡಪದ ಅಪ್ಪಣ್ಣ ಸಂಸ್ಥಾನ ಮಠದ ಅನ್ನದಾನ ಭಾರತಿ ಅಪ್ಪಣ್ಣ ಸಮ್ಮೇಳನ ಉದ್ಘಾಟಿಸಿದರು. ಸಮಾಜ ಸೇವಾ ಸಂಸ್ಥೆಗಳ ಮುಖ್ಯಸ್ಥ ಜೆರಾಲ್ಡ್ ಡಿಸೋಜಾ ಎಸ್.ಜೆ, ನಿವೃತ್ತ ಉಪನ್ಯಾಸಕ ಪಿ.ವೈ.ದಂಡಾವತಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ರೇಣುಕಾ ಉಪಸ್ಥಿತರಿದ್ದರು.

ಚಿನ್ಮಯಿ ಜೆಸಿ ಶಾಲಾ ಮಕ್ಕಳು ಸ್ವಾಗತ ಗೀತೆ ಹಾಡಿದರು. ಸಿಸ್ಟರ್ ಲೀನಾ ಸ್ವಾಗತಿಸಿದರು. ಸಿಸ್ಟರ್ ಆಫ್ ಚಾರಿಟಿ ಸೇವಾ ಸದನ ಸಮಾಜ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥೆ ಸಿಸ್ಟರ್ ಬೀನಾ ಯಲ್ಲೂರಕರ್ ಪ್ರಾಸ್ತಾವಿಕ ಮಾತನಾಡಿದರು. ಸಿಸ್ಟರ್ ಗ್ಲೋರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.