ADVERTISEMENT

ಮಕ್ಕಳ ಆರೋಗ್ಯಕ್ಕಾಗಿ ಪೋಲಿಯೋ ಹಾಕಿಸಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 8:32 IST
Last Updated 29 ಜನವರಿ 2018, 8:32 IST
ತಾಂಬಾ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ ಮುಂಜಿ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕಿದರು
ತಾಂಬಾ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ ಮುಂಜಿ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕಿದರು   

ತಾಂಬಾ: ಮಕ್ಕಳಲ್ಲಿ ಭಯಾನಕ ರೋಗಗಳು ಸುಳಿಯುವುದನ್ನು ತಪ್ಪಿಸಲು ಪ್ರತಿಯೊಬ್ಬರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಹನಿ ಹಾಕಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಕಾಶ ಮುಂಜಿ ಹೇಳಿದರು.

ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ರಾಷ್ಠೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಯಾವೊಂದು ಮಗುವಿಗೂ ರೋಗಗಳು ಬಾರದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ದೇಶಾದ್ಯಂತ ರಾಷ್ಠೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಸದ್ಬಳಕೆ ನಾವೆಲ್ಲ ಮಾಡಿಕೊಳ್ಳಬೇಕು ಎಂದರು.

ತಾಲೂಕ ವೈಧಾಧಿಕಾರಿ ಈರಣ್ಣ ಧಾರವಾಡಕರ ಮಾತನಾಡಿ, ಗ್ರಾಮದ ಸರ್ಕಾರಿ ಆಸ್ಪತ್ರೆ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಲ್ಲಿ ಸುಮಾರು 30 ಪಲ್ಸ್ ಪೋಲಿಯೊ ಬೂತ್‌ನಲ್ಲಿ 60 ಜನ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದರು.

ADVERTISEMENT

ಡಾ.ಎಸ್.ಡಿ.ಜವಳಿ, ಹಿರಿಯ ಆರೋಗ್ಯ ಸಹಾಯಕಿ ಎಂ.ಜಿ.ಮದಗುಣಕಿ, ಕಿರಿಯ ಆರೋಗ್ಯ ಸಹಾಯಕಿ ಟಿ.ಎಚ್.ಪಿಂಜಾರ, ಆರ್.ಎ.ಸನದಿ, ವಿನಯ ಅಸಲಕರ್, ಎಸ್.ಎಸ್.ವಾಲಿ, ಸಿದ್ದು ಗಂಗನಳ್ಳಿ, ಆಶಾ ಕಾರ್ಯಕರ್ತೆಯರಾದ ಜೋತಿ ಅಂಬಲಿ, ಕಾಶಿಬಾಯಿ ಸೋಮನಿಂಗ, ಶ್ರೀದೇವಿ ಹತ್ತಳ್ಳಿ, ಸಾವಿತ್ರಿ ಹಿರೇಕುರಬರ, ಕಮಾಲ ವಾಲಿಕಾರ, ರಾಜೇಶ್ವರಿ ಕೇಮಶೇಟಿ, ಲಕ್ಷ್ಮಿ ಬಿಸನಾಳ, ಸಾವಿತ್ರಿ ಬೇನೂರ, ಸರಿತಾ ಆಳೂರ, ಕವಿತಾ ಪುರಾಣಿಕ, ಕಾಶಿಬಾಯಿ ತಳವಾರ ಇದ್ದರು.

‘ಪೋಲಿಯೊ ಮುಕ್ತ ಭಾರತಕ್ಕೆ ಶ್ರಮಿಸಿ’

ದೇವರ ಹಿಪ್ಪರಗಿ: ಪಾಲಕರು ತಮ್ಮ ಮಗುವಿಗೆ ಪೋಲಿಯೊ ಹನಿ ಹಾಕಿಸುವುದರ ಮೂಲಕ ಪೋಲಿಯೊ ಮುಕ್ತ ಭಾರತದ ಗೆಲುವಿನಲ್ಲಿ ಪಾಲುದಾರರಾಗಬೇಕು ಎಂದು ಡಾ.ಎಸ್.ಎಸ್.ಯಡಹಳ್ಳಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜ.28 ರ 'ಪೊಲಿಯೋ ಮೇಲಿನ ನಮ್ಮ ಗೆಲುವಿಗೆ 2 ಹನಿಗಳು ಸಾಕು' ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾತನಾಡಿದರು.

ಭಾರತ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಮಹತ್ವಪೂರ್ಣ ಕಾರ್ಯಕ್ರಮ ಇದಾಗಿದ್ದು, ಎಲ್ಲ ಪಾಲಕರು ತಮ್ಮ ಐದು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಈ ಲಸಿಕೆ ಹಾಕಿಸುವುದರ ಮೂಲಕ ಮಗುವಿನ ಆರೋಗ್ಯಪೂರ್ಣ ಜೀವನಕ್ಕೆ ಮುಂದಾಗಬೇಕು ಎಂದು ಹೇಳಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಶಂಕರಲಿಂಗಾನಂದ ಬುದ್ನಿ, ಎಸ್.ಬಿ.ಮಠ, ಎಸ್.ಬಿ.ಕಲ್ಲೂರ, ಬಿ.ಪಿ.ಜಕ್ಕನಗೌಡರ, ಎಸ್.ಎಸ್.ಮೋರಟಗಿ, ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ಎನ್.ಕೆ.ಪೂಜಾರಿ ಇದ್ದರು.

ಕೋರವಾರ ಪ್ರಾಥಮಿಕ ಆರೋಗ್ಯ ಕೇಂದ್ರ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡಾ.ಬಿ.ಎನ್.ಕಾಖಂಡಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಬ್ಬಂದಿ ಸತೀಶ ರೊಟ್ಟಿ, ಆಶಾ ಕಾರ್ಯಕರ್ತೆಯರು ಇದ್ದರು.

ಸಿಂದಗಿಯಲ್ಲಿ 41, 500 ಮಕ್ಕಳಿಗೆ ಲಸಿಕೆ

ಸಿಂದಗಿ: ತಾಲ್ಲೂಕುದಾದ್ಯಂತ 222 ಲಸಿಕಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಒಟ್ಟು 51352 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು ಮೂರು ದಿನಗಳ ಕಾರ್ಯಕ್ರಮದಲ್ಲಿ ಮೊದಲನೇ ದಿನವೇ ಅಂದಾಜು 41500 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ.

448 ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಈ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಮಕೃಷ್ಣ ಇಂಗಳೆ ‘ಪ್ರಜಾವಾಣಿ’ ಗೆ ತಿಳಿಸಿದರು.
––––––––––––––––––––––––––––––––––––––––––––––––––––––––––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.