ADVERTISEMENT

ಆದಿಶಕ್ತಿ ದರ್ಗಾ ಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನೆ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 15:30 IST
Last Updated 18 ಆಗಸ್ಟ್ 2022, 15:30 IST
ರಾಜೇಶ ದೇವಗಿರಿ
ರಾಜೇಶ ದೇವಗಿರಿ   

ವಿಜಯಪುರ: ನಗರದ ಶಾಹಪೇಟೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆದಿಶಕ್ತಿ ದುರ್ಗಾ ಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭ ಆಗಸ್ಟ್‌ 20ರಿಂದ 23ರ ವರೆಗೆ ನಡೆಯಲಿದೆ ಎಂದು ಶ್ರೀ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿ ಸಂಚಾಲಕ ರಾಜೇಶ ದೇವಗಿರಿ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್‌ 20ರಂದು ಬೆಳಿಗ್ಗೆ 7ಕ್ಕೆ ಕುಂಭಮೇಳ, ಬೆಳಿಗ್ಗೆ 9ಕ್ಕೆ ಸಿದ್ದೇಶ್ವರ ಗುಡಿಯಿಂದ ದೇವಸ್ಥಾನದ ವರಗೆ ಮೂರ್ತಿ ಮೆರವಣಿಗೆ ಆಗಸ್ಟ್‌ 22ರಂದು ಬೆಳಿಗ್ಗೆ ಲಂಬೋಧರ ಪೂಜೆ, ಅಗ್ನಿ ಜನನ ಪೂರ್ವಕ ಗಣಹೋಮ, ನವಗ್ರಹ ಶಾಂತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಆಗಸ್ಟ್‌ 23ರಂದು ಬೆಳಿಗ್ಗೆ 11ಕ್ಕೆ ಶ್ರೀದೇವಿಯ ಅಷ್ಟಬಂಧ ಸ್ಥಿರ ಪ್ರತಿಷ್ಠಾಪನಾ, ಕಲಾನ್ಯಾಶ ಪ್ರಾಣ ಪ್ರತಿಷ್ಠಾಪನಾ, ಶಿಖರ ಕಳಸ ಪ್ರತಿಷ್ಠಾಪನೆ ನಡೆಯಲಿದೆ ಎಂದು ತಿಳಿಸಿದರು.

ADVERTISEMENT

ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದು, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಶ್ರೀ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿಯ ಪ್ರಮುಖರಾದ ರಾಜು ಕೊಟ್ಟಲಗಿ, ಸಂತೋಷ ಖೈರಮೋಡೆ, ಸಿದ್ದು ಬಾಗಲಕೋಟೆ, ಮಲ್ಲಿಕಾರ್ಜುನ ಹಿಪ್ಪರಗಿ, ಭರತ್‌ ಧನಶೆಟ್ಟಿ, ರಾಜು ಗಾಯಕವಾಡ, ಕಿರಣ ಮಸ್ಕಿ, ಮನೋಜ ಶರ್ಮಾ, ರಾಜು ಚಿಣಗಿ, ರಾಜು ಕುರ್ಲೆ, ಗುರುಬಸು ಕತ್ನಳ್ಳಿ, ಆನಂದ ಮಹಾಜನಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.