ADVERTISEMENT

ಅಮೆರಿಕಕ್ಕೆ ಆಲಮಟ್ಟಿ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:30 IST
Last Updated 1 ಜುಲೈ 2025, 13:30 IST
ಆಲಮಟ್ಟಿ ಪುರವರ ಹಿರೇಮಠದ ರುದ್ರಮುನಿ ಸ್ವಾಮೀಜಿ
ಆಲಮಟ್ಟಿ ಪುರವರ ಹಿರೇಮಠದ ರುದ್ರಮುನಿ ಸ್ವಾಮೀಜಿ   

ಆಲಮಟ್ಟಿ: ಆಲಮಟ್ಟಿಯ ಪುರವರ ಹಿರೇಮಠದ ರುದ್ರಮುನಿ ಸ್ವಾಮೀಜಿಗಳು ಮಂಗಳವಾರ ಬೆಂಗಳೂರಿನಿಂದ ಅಮೆರಿಕದತ್ತ ದೈವಿಕ ಯಾತ್ರೆ ಕೈಗೊಂಡಿದ್ದಾರೆ.

ಅಮೆರಿಕಾದ ಮಿಚಿಗನ್ ರಾಜ್ಯದ ಡೆಟ್ರಾಯಿಟ್ ನಗರದಲ್ಲಿ ಜುಲೈ 4ರಿಂದ 6ರವರೆಗೆ ನಡೆಯಲಿರುವ ವೀರಶೈವ ಸಮಾಜ ಆಫ್‌  ನಾರ್ತ್ ಅಮೆರಿಕ (VSNA)ದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಅವರು ಭಾಗವಹಿಸಲಿದ್ದಾರೆ.

ಈ ಬೃಹತ್ ಸಮ್ಮೇಳನವು ವಿಶ್ವದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು, ವಿಶೇಷವಾಗಿ ಲಿಂಗಾಯತ ವೀರಶೈವ ಭಕ್ತರು ಸಂಯುಕ್ತವಾಗಿ ಆಯೋಜಿಸಿರುವ ಪ್ರಭಾವಶಾಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದೆ.  ರುದ್ರಮುನಿ ಸ್ವಾಮೀಜಿ ಅವರು ಈ ವೇದಿಕೆಯಲ್ಲಿ ವೀರಶೈವ-ಲಿಂಗಾಯತ ಧರ್ಮದ ಆಧ್ಯಾತ್ಮಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿಗಳು ಮತ್ತು ನೈತಿಕ ಚಿಂತನೆಗಳ ಕುರಿತು ಪ್ರವಚನ ನೀಡಲಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.