
ಹೊರ್ತಿ: 'ದೇಶ ಕಾಯುವ ಯೋಧರ ಸೇವೆ ದೊಡ್ಡದು ಅವರನ್ನು ಗೌರವದಿಂದ ಕಾಣಬೇಕು' ಎಂದು ಶಿರಶ್ಯಾಡದ ಅಭಿನವ ಮುರಘೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ದೇಗಿನಾಳ ಗ್ರಾಮದ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಜೈ ಜವಾನ-ಜೈ ಜವಾನ ಕಿಸಾನ ಸಂಘ ಹಾಗೂ ಹೊರ್ತಿ ಸರ್ವೋದಯ ಕಾಲೇಜು ಮತ್ತು ಸಮಸ್ತ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ನಿವೃತ್ತಿ ಹೊಂದಿದ ಗ್ರಾಮದ ಯೋಧರಾದ ಗೌರಿಶಂಕರ ನಿಲಂಗಿ ಹಾಗೂ ನಾಗಪ್ಪ ಭೀ. ಏಡಿಗೆ ಮತ್ತು ಓಂ ಶಂಕರ ಅ.ನಿಲಂಗಿ ಅವರನ್ನು ಜಂಟಿಯಾಗಿ ಸನ್ಮಾನಿಸಿ ಆಶೀರ್ವಚನ ನೀಡಿದರು.
ಈ ದೇಗಿನಾಳ ಗ್ರಾಮದಲ್ಲಿ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದಲ್ಲಿ ಹೊರ್ತಿ ಅನೀಕೆತನ ಶಿಕ್ಷಣ ಸಂಸ್ಥೆಯ ಸರ್ವೋದಯ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಶಿಕ್ಷಣದ ಮಹತ್ವ ಕುರಿತು ತಿಳಿವಳಿಕೆಯನ್ನು ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಶಿಕ್ಷಕರು ಶಿಕ್ಷಣದ ಜತೆ ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸಬೇಕು. ಎಲ್ಲರಿಗೂ ಅನ್ನ ನೀಡುವ ರೈತ ಹಾಗೂ ಹಗಲಿರುಳು ಎನ್ನದೇ ದೇಶ ಕಾಯುವ ಯೋಧರು ಮತ್ತು ಶಿಕ್ಷಣ ಜ್ಞಾನವನ್ನು ನೀಡುವ ಶಿಕ್ಷಕರು ಈ ಮೂವರು ಶ್ರೇಷ್ಠರು ಇವರಿಗೆ ಗೌರವ ಕೊಡಬೇಕು' ಎಂದು ಹೇಳಿದರು.
ಹೊರ್ತಿ ಸರ್ವೋದಯ ಕಾಲೇಜು ಸಂಸ್ಥಾಪಕ ರೇವಣಸಿದ್ಧ ಶಿ.ಪೂಜಾರಿ ಮಾತನಾಡಿ,'ಈ ದೇಗಿನಾಳ ಗ್ರಾಮದಲ್ಲಿ ಇನ್ನು ಮುಂದೆ ಸೈನ್ಯಕ್ಕೆ ಸೇರಿದ ಮಕ್ಕಳಿಗೆ ವಸತಿ ಸಹಿತ ಉಚಿತ ಶಿಕ್ಷಣ ಕೋಡುವುದಾಗಿ' ಹೇಳಿದರು.
ಈ ವೇಳೆ, ದೇಗಿನಾಳ ಗ್ರಾಮದ ರಮೇಶ ನಾ.ಜಾಧವ ಅಧ್ಯಕ್ಷತೆ ವಹಿಸಿದ್ದರು, ದೇಗಿನಾಳ ಗ್ರಾಮದ ಮಹಾಲಕ್ಷ್ಮಿದೇವಿ ಅಧ್ಯಕ್ಷ ರಮೇಶಗೌಡ ಬಿರಾದಾರ, ಗುರುಬಾಳ ನಿಲಂಗಿ, ಹೊರ್ತಿ ಸರ್ವೋದಯ ಕಾಲೇಜು ಸಂಸ್ಥಾಪಕ ರೇವಣಸಿದ್ಧ ಪೂಜಾರಿ, ಶಾಲಾ ಮುಖ್ಯ ಗುರು ಸುರೇಶ ಬೊಳೆಗಾಂವ, ಬಸನಾಳ ಪಿಡಿಒ ಮುತ್ತು ಗ.ನಿಲಂಗಿ, ನಾರಾಯಣ ಜಾಧವ, ಭರತ ನಿಕ್ಕಂ, ರಣಜಿತ ದೊಂಡಿಬಾ ಏಡಿಗೆ, ರಣಜಿತ ಲ.ಸಿಂಧೆ, ಗ್ರಾಮದ ನಿವೃತ್ತಿ ಹೊಂದಿದ ಯೋಧರಾದ ಗೌರಿಶಂಕರ ನಿಲಂಗಿ ಹಾಗೂ ನಾಗಪ್ಪ ಭೀ. ಏಡಿಗೆ ಮತ್ತು ಓಂ ಶಂಕರ ಅ.ನಿಲಂಗಿ, ಹಾಗೂ ಹಾಲಿ, ಮಾಜಿ ಸೈನಿಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.